ನವದೆಹಲಿ: 'ಆಪರೇಷನ್ ಸಿಂಧೂ' ಕಾರ್ಯಾಚರಣೆ ಮೂಲಕ ಇರಾನ್ನಿಂದ ಈವರೆಗೂ 1,117 ಭಾರತೀಯರನ್ನು ಕರೆತರಲಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ಈ ಕರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದಾರೆ.

'ಜೂನ್ 21, ಶನಿವಾರ ರಾತ್ರಿ 11.30ಕ್ಕೆ ವಿಶೇಷ ವಿಮಾನವು ಮಶ್ಹದ್ನಿಂದ ನವದೆಹಲಿಗೆ ಬಂದಿಳಿಯಿತು. ಈ ವಿಮಾನದಲ್ಲಿ 290 ಭಾರತೀಯ ಪ್ರಜೆಗಳು ಇರಾನ್ನಿಂದ ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದಾರೆ' ಎಂದು ಅವರು ತಿಳಿಸಿದ್ದಾರೆ.

'ಇದರೊಂದಿಗೆ ಈವರೆಗೆ 1,117 ಭಾರತೀಯ ಪ್ರಜೆಗಳನ್ನು ಇರಾನ್ನಿಂದ ಕರೆತರಲಾಗಿದೆ' ಎಂದು ಹೇಳಿದ್ದಾರೆ.

ಭಾರತಕ್ಕೆ ವಾಪಾಸ್ ಬಂದವರಲ್ಲಿ ವಿದ್ಯಾರ್ಥಿಗಳು ಸೇರಿದ್ದಾರೆ. ಸುರಕ್ಷಿತವಾಗಿ ಲ್ಯಾಂಡ್ ಆಗಿರುವ ಪ್ರಜೆಗಳು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಭಾರತ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಇಸ್ರೇಲ್ ಹಾಗೂ ಇರಾನ್ ನಡುವಣ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಸ್ಥಿತಿ ಮುಂದುವರಿದಿದೆ.

ಈ ಮೊದಲು ಸಂಘರ್ಷಪೀಡಿತ ಇರಾನ್ನಿಂದ ಭಾರತೀಯರನ್ನು ಕರೆತರಲು ಭಾರತ ಸರ್ಕಾರವು 'ಆಪರೇಷನ್ ಸಿಂಧೂ' ಆರಂಭಿಸಿತ್ತು. ಇದಕ್ಕೆ ಸಮಾನವಾಗಿ ಇಸ್ರೇಲ್ನಿಂದಲೂ ಭಾರತೀಯರನ್ನು ಕರೆತರಲು ಕ್ರಮ ಕೈಗೊಳ್ಳಲಾಗಿದೆ.
.Operation Sindhu | ಇರಾನ್ನಿಂದ 800ಕ್ಕೂ ಹೆಚ್ಚು ಭಾರತೀಯರು ವಾಪಸ್.Operation Sindhu: ಇರಾನ್ ನಂತರ ಇಸ್ರೇಲ್ನಿಂದಲೂ ಭಾರತೀಯರನ್ನು ಕರೆತರಲು ಕ್ರಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.