ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆಯಲ್ಲಿಲ್ಲದ 2 ಸಾವಿರಕ್ಕೂ ಹೆಚ್ಚಿನ ಕಾನೂನು ರದ್ದು: ಸಚಿವ ಜಿತೇಂದ್ರ ಸಿಂಗ್

Last Updated 9 ಏಪ್ರಿಲ್ 2023, 11:20 IST
ಅಕ್ಷರ ಗಾತ್ರ

ಮುಂಬೈ: ‘ಆಡಳಿತ ಮತ್ತು ವ್ಯವಹಾರವನ್ನು ಸುಗಮಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಒಂಬತ್ತು ವರ್ಷಗಳಲ್ಲಿ ಬಳಕೆಯಲ್ಲಿ ಇಲ್ಲದ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಕಾನೂನು ಮತ್ತು ನಿಯಮಗಳನ್ನು ರದ್ದುಪಡಿಸಿದೆ’ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಭಾನುವಾರ ಹೇಳಿದ್ದಾರೆ.

ಮುಂಬೈನಲ್ಲಿ ಯಶ್‌ರಾಜ್ ಸಂಶೋಧನಾ ಫೌಂಡೇಷನ್ ಆಯೋಜಿಸಿದ್ದ ‘ಕೃತಜ್ಞತಾ ಸಮಾರಂಭ’ದಲ್ಲಿ ‘ಯಶ್‌ರಾಜ್ ಭಾರತಿ ಸಮ್ಮಾನ್’ (ವೈಬಿಎಸ್‌) ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ‘ಈ ಹಿಂದಿನ ಸರ್ಕಾರಗಳ ಯಥಾಸ್ಥಿತಿಯ ವಿಧಾನಗಳಿಗಿಂತ ಭಿನ್ನವಾಗಿ ಪ್ರಧಾನಿ ಮೋದಿ ಅವರು ನಡೆದುಕೊಂಡಿದ್ದಾರೆ. ಬ್ರಿಟಿಷರ ಕಾಲದಿಂದಲೂ ಉಳಿದುಕೊಂಡು ಬಂದಿದ್ದ ಹಾಗೂ ನಾಗರಿಕರಿಗೆ ಅನನುಕೂಲತೆಯನ್ನುಂಟು ಮಾಡುವ ಕೆಲವು ಕಾನೂನು ಮತ್ತು ನೀತಿಗಳನ್ನು ತೆಗೆದುಹಾಕಲು ಅವರು ಧೈರ್ಯವನ್ನು ಪ್ರದರ್ಶಿಸಿದ್ದಾರೆ’ ಎಂದು ತಿಳಿಸಿದ್ದಾರೆ.

‘ನಾಗರಿಕರ ಜೀವನವನ್ನು ಸುಲಭಗೊಳಿಸುವುದೇ ಉತ್ತಮ ಆಡಳಿತದ ಗುರಿಯಾಗಿದೆ’ ಎಂದೂ ಅವರು ಹೇಳಿದ್ದಾರೆ.

ಯಶ್‌ರಾಜ್ ಭಾರತಿ ಸಮ್ಮಾನ್ ಪ್ರಶಸ್ತಿ ಸ್ಥಾಪಿಸಿ, ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸುವ ಕಾರ್ಯ ಮಾಡುತ್ತಿರುವ ಯಶ್‌ರಾಜ್ ಸಂಶೋಧನಾ ಫೌಂಡೇಷನ್‌ನ ಕಾರ್ಯವನ್ನು ಸಚಿವರು ಶ್ಲಾಘಿಸಿದರು.

‘ಆರೋಗ್ಯ ಕ್ಷೇತ್ರದಲ್ಲಿನ ನಾವೀನ್ಯತೆ, ಜನರ ಜೀವನ ಪರಿವರ್ತನೆ ಮತ್ತು ನೈತಿಕ ಆಡಳಿತ ಎಂಬ ಮೂರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT