ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶಿ ವಿಶ್ವನಾಥ ಧಾಮ: ಹೊಸ ವರ್ಷದ ಮೊದಲ ದಿನ 5 ಲಕ್ಷ ಮಂದಿ ಭೇಟಿ

Last Updated 2 ಜನವರಿ 2022, 11:31 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಉದ್ಘಾಟಿಸಿದ ನವೀಕೃತ ಕಾಶಿ ವಿಶ್ವನಾಥ ಧಾಮಕ್ಕೆ ವರ್ಷದ ಮೊದಲ ದಿನವಾದ ಶನಿವಾರ ಸುಮಾರು 5 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.

ವಾರಾಣಸಿಯಲ್ಲಿನ ಶಿವನ ದೇವಸ್ಥಾನಕ್ಕೆ ಮಹಾಶಿವರಾತ್ರಿ ದಿನ ಭೇಟಿ ನೀಡುವುದು ಒಳ್ಳೆಯದು ಎಂದು ಭಕ್ತರು ಭಾವಿಸಿದ್ದಾರೆ. ಆದರೆ, ಇದುವರೆಗೂ ಆ ದಿನ ಭಕ್ತರ ಸಂಖ್ಯೆ 2.5 ಲಕ್ಷ ದಾಟಿಲ್ಲ ಎಂದೂ ತಿಳಿಸಿವೆ.

‘ಜನವರಿ 1 ರಂದು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ 5 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿರುವುದು ಸ್ಥಳೀಯ ಆಡಳಿತಕ್ಕೆ ಅಚ್ಚರಿ ಮೂಡಿಸಿದೆ. ಭಕ್ತರ ಸಂಖ್ಯೆ 1 ಲಕ್ಷ ದಾಟಲಾರದು ಎಂದು ಭಾವಿಸಿದ್ದ ಆಡಳಿತಾಧಿಕಾರಿಗಳಿಗೆ ಸಾಗರೋಪಾದಿಯಲ್ಲಿ ಭಕ್ತರು ಬಂದಿದ್ದು ಅಚ್ಚರಿ ಮೂಡಿಸಿದೆ’ ಎಂದು ಮೂಲವೊಂದು ಹೇಳಿದೆ.

ಐದು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಕಾಶಿ ವಿಶ್ವನಾಥ ಧಾಮ ಸಂಕೀರ್ಣದ ಮೊದಲ ಹಂತವನ್ನು ಪ್ರಧಾನಿ ಮೋದಿ ಕಳೆದ ತಿಂಗಳು ಉದ್ಘಾಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT