ನವದೆಹಲಿ: ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇನ್ನೂ 94.47 ಲಕ್ಷ ಡೋಸ್ ಲಸಿಕೆಗಳು ಲಭ್ಯವಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮುಂದಿನ ಮೂರು ದಿನಗಳಲ್ಲಿ 36 ಲಕ್ಷ ಡೋಸ್ಗಳನ್ನು ಮತ್ತೆ ಪೂರೈಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
ಕೇಂದ್ರ ಸರ್ಕಾರ ಇದುವರೆಗೆ 17.02 ಕೋಟಿ ಲಸಿಕೆಗಳನ್ನು ಉಚಿತವಾಗಿ ರಾಜ್ಯ ಸರ್ಕಾರಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಿದೆ. ಇದರಲ್ಲಿ ವ್ಯರ್ಥವಾಗಿರುವುದು ಸೇರಿದಂತೆ 16.07 ಕೋಟಿಯಷ್ಟು ಬಳಕೆಯಾಗಿದೆ ಎಂದು ತಿಳಿಸಿದೆ.
ಮೇ 1ರಿಂದ ಮೂರನೇ ಹಂತದ ಲಸಿಕಾ ಅಭಿಯಾನ ಆರಂಭಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.