ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾರ್ವಜನಿಕ ಸ್ಥಳಗಳಲ್ಲಿ ಅವಧಿ ಮೀರಿದ ವಾಹನಗಳು ಕಂಡರೆ ವಶಕ್ಕೆ ಪಡೆಯಲು ಆದೇಶ

Published 20 ಜೂನ್ 2024, 13:18 IST
Last Updated 20 ಜೂನ್ 2024, 13:18 IST
ಅಕ್ಷರ ಗಾತ್ರ

ನವದೆಹಲಿ: ‘ಅವಧಿ ಮೀರಿದ ವಾಹನಗಳನ್ನು ಖಾಸಗಿ ಸ್ಥಳಗಳಲ್ಲಿ ನಿಲ್ಲಿಸಬೇಕು. ಇಲ್ಲವೇ ಗುಜರಿಗೆ ಹಾಕಬೇಕು’ ಎಂದು ದೆಹಲಿ ಸರ್ಕಾರವು ಗುರುವಾರ ಹೊರಡಿಸಿರುವ ಸಾರ್ವಜನಿಕ ತಿಳಿವಳಿ ಸೂಚನೆ.

ಅವಧಿ ಮೀರಿದ ವಾಹನಗಳು ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದು ಕಂಡುಬಂದಿಲ್ಲ, ಅದನ್ನು ಮಾರ್ಗಸೂಚಿ ಉಲ್ಲಂಘನೆ ಎಂದೇ ಪರಿಗಣಿಸಿ ವಶಕ್ಕೆ ಪಡೆಯುವುದಾಗಿ ನೋಟಿಸ್‌ನಲ್ಲಿ ಹೇಳಲಾಗಿದೆ.

ಕಳೆದ ಫೆಬ್ರುವರಿಯಲ್ಲಿ ಈ ಕುರಿತು ಹೊರಡಿಸಿದ್ದ ಮಾರ್ಗಸೂಚಿಯನ್ನು ಪುನುರಚ್ಚರಿಸಿರುವ ಸರ್ಕಾರ, ಮನೆಯ ಮುಂಭಾಗದ ರಸ್ತೆಯನ್ನೂ ಒಳಗೊಂಡು ಸಾರ್ವಜನಿಕ ಸ್ಥಳಗಳಲ್ಲಿ ಅವಧಿ ಮೀರಿದ ವಾಹನಗಳನ್ನು ನಿಲ್ಲಿಸುವುದನ್ನು ಸಾರಿಗೆ ಇಲಾಖೆಯು ನಿರ್ಬಂಧಿಸಿದೆ. ಇಂಥ ವಾಹನಗಳನ್ನು ಅವುಗಳ ಮಾಲೀಕರು ತಮಗೆ ಸೇರಿದ ಖಾಸಗಿ ಜಾಗದಲ್ಲಿ ನಿಲ್ಲಿಸಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳ ಜತೆಗೆ, ಒಬ್ಬರಿಗಿಂತ ಹೆಚ್ಚಿನ ಜನರಿಗೆ ಹಂಚಿಕೆಯಾಗಿರುವ ಪಾರ್ಕಿಂಗ್ ಜಾಗದಲ್ಲೂ ನಿಲ್ಲಿಸಿಕೊಳ್ಳುವಂತಿಲ್ಲ ಎಂದೆನ್ನಲಾಗಿದೆ.

ಅವಧಿ ಮೀರಿದ ಸುಮಾರ 55 ಲಕ್ಷ ವಾಹನಗಳು ಇವೆ ಎಂದು ದೆಹಲಿ ಸರ್ಕಾರ ಅಂದಾಜು ಮಾಡಿದೆ. ದೆಹಲಿಯಿಂದ ಇಂಥ ವಾಹನಗಳನ್ನು ಹೊರಕ್ಕೆ ಸಾಗಿಸುವುದಾದರೆ ಅವಧಿ ಮೀರುವ ಒಂದು ವರ್ಷದೊಳಗೆ ನಿರಾಕ್ಷೇಪಣಾ ಪತ್ರವನ್ನು ಪಡೆಯಬೇಕು. ಆದರೆ ಅವಧಿ ಮೀರಿದ್ದರೆ ಅಂಥ ವಾಹನಗಳಿಗೆ ಯಾವುದೇ ವಿನಾಯಿತಿ ಇಲ್ಲ ಎಂದಿದೆ.

ಅವಧಿ ಮೀರಿದ ವಾಹನಗಳ ಮಾಲೀಕರಿಗೆ ಮತ್ತೊಂದು ಮಾರ್ಗೋಪಾಯ ನೀಡಿರುವ ದೆಹಲಿ ಸರ್ಕಾರ, vscrap.parivahan.gov.in ಅಂತರ್ಜಾಲ ತಾಣದ ಮೂಲಕ ನೋಂದಾಯಿಸಿಕೊಂಡು, ಗುಜರಿಗೆ ಕಳುಹಿಸಬಹುದು.

ಇವೆಲ್ಲವನ್ನೂ ಪರಿಶೀಲಿಸಲು ಸಾರಿಗೆ ಇಲಾಖೆಯ ಜಾರಿ ವಿಭಾಗ, ದೆಹಲಿ ಪಾಲಿಕೆ, ಸಂಚಾರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಲಿದ್ದಾರೆ. ಅವಧಿ ಮೀರಿದ ವಾಹನಗಳನ್ನು ವಶಕ್ಕೆ ಪಡೆಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡೀಸೆಲ್ ವಾಹನಗಳು 10 ವರ್ಷ ಹಾಗೂ ಪೆಟ್ರೋಲ್ ಎಂಜಿನ್‌ ವಾಹನಗಳು 15 ವರ್ಷ ಮೀರಿದಲ್ಲಿ ಅವುಗಳನ್ನು ವಶಕ್ಕೆ ಪಡೆದು ನಿಷೇಧಿಸುವಂತೆ 2018ರಲ್ಲಿ  ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಇದಕ್ಕೂ ಪೂರ್ವದಲ್ಲಿ 2014ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಹೊರಡಿಸಿದ ಆದೇಶದಲ್ಲಿ 15 ವರ್ಷ ಮೇಲಿನ ವಾಹನಗಳು ಸಾರ್ವಜನಿಕ ಸ್ಥಗಳಲ್ಲಿ ನಿಲುಗಡೆ ಮಾಡುವಂತಿಲ್ಲ ಎಂದು ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT