ನವದೆಹಲಿ: ಪಹಲ್ಗಾಮ್ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ವಾತಾವರಣ ಏರ್ಪಟ್ಟಿದ್ದು, ಯಾವುದೇ ಕ್ಷಣದಲ್ಲಿ ಪಾಕಿಸ್ತಾನವು ಭಾರತದ ಮೇಲೆ ದಾಳಿ ನಡೆಸುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ, ನಾಳೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ವರಕ್ಷಣೆ ತಾಲೀಮು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ. ಇದಕ್ಕೆ ಸಹಕಾರ ನೀಡುವಂತೆ, ನಾಗರಿಕರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ಕರೆ ನೀಡಿದೆ.

‘‘ಎಲ್ಲಾ ನಾಗರಿಕರು, ಬಿಜೆಪಿ ಕಾರ್ಯಕರ್ತರು, ನಾಯಕರು, ವಿದ್ಯಾರ್ಥಿಗಳು ಇಚ್ಚೆಯಿಂದ ಸ್ವರಕ್ಷಣೆ ತಾಲೀಮಿನಲ್ಲಿ ಭಾಗವಹಿಸಿ. ನಿಮ್ಮ ಭಾಗವಹಿಸುವಿಕೆ, ಬದಲಾವಣೆಗೆ ಕಾರಣವಾಗುತ್ತದೆ’’ ಎಂದು ಬಿಜೆಪಿ, ಎಕ್ಸ್(ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದೆ.

ದೇಶದಾದ್ಯಂತ ಜರುಗುವ ಈ ತಾಲೀಮಿನಲ್ಲಿ ಜನಪ್ರತಿನಿಧಿಗಳು ಕೂಡ ಭಾಗವಹಿಸುವಂತೆ ಕೋರಿದೆ.

ನಾಗರೀಕ ರಕ್ಷಣಾ ವ್ಯವಸ್ಥೆಯನ್ನು ಪರೀಕ್ಷಿಸುವ ದೃಷ್ಠಿಯಿಂದ ಮೇ.7ರಂದು ದೇಶದಾದ್ಯಂತ , ಸ್ವರಕ್ಷಣೆ ತಾಲೀಮು ಮಾಡುವಂತೆ, ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಗೃಹ ಸಚಿವಾಲಯ ಆದೇಶಿಸಿದೆ.

ತಾಲೀಮಿನ ವೇಳೆ, ವಾಯುದಾಳಿ ಎಚ್ಚರಿಕೆ ನೀಡುವ ಸೈರನ್ ಮೊಳಗಿಸುವಂತೆ, ದಾಳಿಯ ವೇಳೆ ನಾಗರೀಕನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸುವುದು ಸೇರಿದಂತೆ, ಮುಂತಾದ ಸುರಕ್ಷತಾ ಕ್ರಮಗಳನ್ನು ಸೇರಿಸಿಕೊಳ್ಳಲು ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.