ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಟೂನಿಸ್ಟ್‌ಗಳಿಗೆ ಸರಕು ಸೃಷ್ಟಿಸುತ್ತಿರುವ ಪಾಕ್‌ ಪ್ರಧಾನಿ: ರಾಜನಾಥ್‌ ಸಿಂಗ್‌

ನೌಕಾಪಡೆಗೆ ಐಎನ್‌ಎಸ್_ಖಾಂಡೇರಿ
Last Updated 28 ಸೆಪ್ಟೆಂಬರ್ 2019, 5:35 IST
ಅಕ್ಷರ ಗಾತ್ರ

ಮುಂಬೈ:’ಜಗತ್ತಿನಾದ್ಯಂತ ಬಾಗಿಲಿನಿಂದ ಬಾಗಿಲಿಗೆ ಸುತ್ತುತ್ತಿರುವಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌, ಕಾರ್ಟೂನಿಸ್ಟ್‌ಗಳಿಗಾಗಿ ಸಾಕಷ್ಟು ಸರಕು ಸೃಷ್ಟಿಸುತ್ತಿದ್ದಾರೆ‘ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ವ್ಯಂಗ್ಯವಾಡಿದ್ದಾರೆ.

ಸ್ಕಾರ್ಪೀನ್ ಸರಣಿಯ 2ನೇ ಸಮರ ಜಲಾಂತರ್ಗಾಮಿ ‘ಐಎನ್‌ಎಸ್ ಖಾಂಡೇರಿ’ಯನ್ನು ಶನಿವಾರ ನೌಕಾಪಡೆಯ ಸೇವೆಗೆ ನಿಯೋಜನೆಗೊಳಿಸಿಮಡಗಾಂವ್ ಹಡಗು ಕಟ್ಟೆಯಲ್ಲಿ ಅವರು ಮಾತನಾಡಿದರು.

‘ಮುಂಬೈನಲ್ಲಿ ನಡೆಸಿದ ದಾಳಿಯಂತೆ ಭಾರತದ ಕರಾವಳಿ‍‍ಪ್ರದೇಶಗಳಲ್ಲಿ ದಾಳಿ ಮಾಡಲುಕೆಲವು ಶಕ್ತಿಗಳು ಹವಣಿಸುತ್ತಿವೆ. ಅವರ ಆಕಾಂಕ್ಷೆ ಪೂರ್ತಿಯಾಗಲು ಬಿಡುವುದಿಲ್ಲ..‘ ಎಂದು ರಾಜನಾಥ್‌ ಸಿಂಗ್ ಎಚ್ಚರಿಕೆ ಸಂದೇಶ ರವಾನಿಸಿದರು.

‘ಜಲಾಂತರ್ಗಾಮಿ ಖಾಂಡೇರಿ ನಿಯೋಜನೆಯೊಂದಿಗೆ ಭಾರತೀಯ ನೌಕಾಪಡೆ ಮತ್ತಷ್ಟು ಪ್ರಬಲಗೊಂಡಿರುವುದನ್ನು ಪಾಕಿಸ್ತಾನ ಅರಿಯಬೇಕು. ಶಸ್ತ್ರಾಸ್ತ್ರ ಪಡೆಯನ್ನು ಇನ್ನಷ್ಟು ಸಮರ್ಥಗೊಳಿಸಲು ಸರ್ಕಾರ ಬದ್ಧವಾಗಿದೆ‘ ಎಂದು ಹೇಳಿದರು.

ಕರಾವಳಿ ಭಾಗದಲ್ಲಿ ಶಾಂತಿ ಕದಡಲು ಪ್ರಯತ್ನಿಸುವವರ ವಿರುದ್ಧ ನೌಕಾಪಡೆ ಕಠಿಣ ಕ್ರಮಕೈಗೊಳ್ಳುತ್ತದೆ ಎಂದರು.

ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಮಾತನಾಡಿರುವ ಇಮ್ರಾನ್‌ ಖಾನ್‌, ‘ಎರಡು ದೇಶಗಳ ನಡುವೆ ಯುದ್ಧವಾದರೆ ಏನು ಬೇಕಿದ್ದರೂ ಆಗಬಹುದು..‘ ಎಂದಿದ್ದಾರೆ. ಇಮ್ರಾನ್‌ ಖಾನ್‌ ವಿಚಾರ ಪ್ರಸ್ತಾಪಿಸಿದ ರಾಜನಾಥ್‌ ಸಿಂಗ್‌, ಪಾಕಿಸ್ತಾನ ಪ್ರಧಾನಿ ಜಗತ್ತಿನ ಬೇರೆ ಬೇರೆ ವೇದಿಕೆಗಳಲ್ಲಿ ವಿಶ್ವ ನಾಯಕರ ಗಮನ ಸೆಳೆಯಲು ನಡೆಸುತ್ತಿರುವ ಪ್ರಯತ್ನವನ್ನು ಮೂದಲಿಸಿದ್ದಾರೆ. ಅವರ ಪ್ರಯತ್ನವು ವ್ಯಂಗ್ಯಚಿತ್ರಕಾರರಿಗೆ ಒಳ್ಳೆಯ ಸರಕನ್ನು ಸೃಷ್ಟಿಸುತ್ತಿದೆ ಎಂದು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT