ಲಖನೌ (ಉತ್ತರ ಪ್ರದೇಶ): ಅಲಿಗಢದಲ್ಲಿ ಪಾಕಿಸ್ತಾನ ಧ್ವಜದ ಮೇಲೆ ಮೂತ್ರ ವಿಸರ್ಜನೆ ಮಾಡುವಂತೆ ಮುಸ್ಲಿಂ ವಿದ್ಯಾರ್ಥಿಯನ್ನು ಒತ್ತಾಯಿಸಿದ ಪ್ರಕರಣ ವರದಿಯಾದ ಬೆನ್ನಲ್ಲೇ, ದಾರಿಯಲ್ಲಿ ಬಿದ್ದಿದ್ದ ಪಾಕ್ ಧ್ವಜವನ್ನು ಎತ್ತಿಕೊಳ್ಳಲು ಪ್ರಯತ್ನಿಸಿದ ಆರೋಪದಲ್ಲಿ 11ನೇ ತರಗತಿಯಲ್ಲಿ ವಿದ್ಯಾರ್ಥಿನಿಯನ್ನು ಶಾಲೆಯಿಂದ ಹೊರಹಾಕಿರುವ ಪ್ರಕರಣ ಸಹರಾನ್ಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ವರದಿಗಳ ಪ್ರಕಾರ, ಸ್ಕೂಟರ್ನಲ್ಲಿ ಹೋಗುತ್ತಿದ್ದ ಬಾಲಕಿಯು ರಸ್ತೆ ಮೇಲೆ ಪಾಕ್ ಧ್ವಜ ಬಿದ್ದಿರುವುದನ್ನು ನೋಡಿದ್ದಳು. ತಕ್ಷಣವೇ ವಾಹನ ನಿಲ್ಲಿಸಿ ಅದನ್ನು ಎತ್ತಿಕೊಳ್ಳಲು ಪ್ರಯತ್ನಿಸಿದ್ದಳಾದರೂ, ಸಾಧ್ಯವಾಗಿರಲಿಲ್ಲ. ಹೀಗಾಗಿ, ಅಲ್ಲಿಂದ ಹೊರಟುಹೋಗಿದ್ದಳು. ಆದರೆ, ಆ ವೇಳೆ ಅದೇ ಮಾರ್ಗದಲ್ಲಿ ಹೋಗುತ್ತಿದ್ದವರು ಉದ್ದೇಶಪೂರ್ವಕವಾಗಿ ವಿಡಿಯೊ ಮಾಡಿಕೊಂಡು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಕೂಡಲೇ ಅದು ಎಲ್ಲೆಡೆ ಹರಿದಾಡಿತ್ತು.

ವಿಡಿಯೊವನ್ನು ನೋಡಿದ ಹಿಂದೂಪರ ಹೋರಾಟಗಾರರು, ಬಾಲಕಿಯ ನಡೆಯನ್ನು 'ದೇಶವಿರೋಧಿ ಕೃತ್ಯ' ಎಂದು ಖಂಡಿಸಿ ಕಿಡಿಕಾರಿದ್ದರು. ಆಕೆ ಓದುತ್ತಿರುವ ಶಾಲೆಯ ಬಳಿ ತೆರಳಿ ಪ್ರತಿಭಟನೆ ನಡೆಸಿ, ಬಾಲಕಿಯನ್ನು ಹೊರಹಾಕುವಂತೆ ಆಗ್ರಹಿಸಿದ್ದರು. ತದನಂತರ ಶಾಲಾಡಳಿತ ಆಕೆಯನ್ನು ಸಂಸ್ಥೆಯಿಂದ ಹೊರಹಾಕಿದೆ.

ಈ ಘಟನೆಯು ಸಹರಾನ್ಪುರ ಜಿಲ್ಲೆಯ ಗಂಗೋ ಪ್ರದೇಶದಲ್ಲಿ ಮಂಗಳವಾರವೇ ನಡೆದಿದೆಯಾದರೂ, ಗುರುವಾರ ಬೆಳಕಿಗೆ ಬಂದಿದೆ.

ಕೋಮು ಸೂಕ್ಷ್ಮ ಜಿಲ್ಲೆಯಾದ ಅಲಿಗಢದಲ್ಲಿ ರಸ್ತೆಯ ಮೇಲೆ ಬಿದ್ದಿದ್ದ ಪಾಕ್ ಧ್ವಜವನ್ನು ಕುತೂಹಲದಿಂದ ಎತ್ತಿಕೊಂಡಿದ್ದ ಮುಸ್ಲಿಂ ಸಮದಾಯದ ವಿದ್ಯಾರ್ಥಿಯನ್ನು ನಿಂದಿಸಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಧ್ವಜದ ಮೇಲೆ 'ಮೂತ್ರ ವಿಸರ್ಜನೆ' ಮಾಡಿಸಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ವರದಿಯಾಗಿತ್ತು. ಅದರ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ.

ಸದ್ಯ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿರುವ ಪೊಲೀಸರು, ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಸಮೀಪದಲ್ಲಿರುವ ಪ್ರವಾಸಿ ಸ್ಥಳದಲ್ಲಿ ಏಪ್ರಿಲ್ 22ರಂದು ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಅದಾದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧ ಮತ್ತಷ್ಟು ಹದಗೆಟ್ಟಿದೆ.
.ಲಖನೌ: ಪಾಕ್ ಧ್ವಜದ ಮೇಲೆ ಮೂತ್ರ ವಿಸರ್ಜನೆ ಮಾಡಿಸಿದ ಗುಂಪು.Pahalgam Terror attack | ಪ್ರತೀಕಾರ: ಸೇನೆಗೆ ಸಂಪೂರ್ಣ ಅಧಿಕಾರ- ಪ್ರಧಾನಿ ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.