ನವದೆಹಲಿ: ಮಂಗಳ ಮತ್ತು ಗುರು ಗ್ರಹಗಳ ನಡುವೆ ಪತ್ತೆ ಮಾಡಲಾಗಿರುವ ಚಿಕ್ಕ ಗ್ರಹವೊಂದಕ್ಕೆ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಪಂ. ಜಸ್ರಾಜ್ ಅವರ ಹೆಸರಿಡಲಾಗಿದೆ.

ಇಂಟರ್ನ್ಯಾಷನಲ್ ಅಸ್ಟ್ರಾನಾಮಿಕಲ್ ಯೂನಿಯನ್ (ಐಎಯು) ಈ ನಾಮಕರಣ ಮಾಡಿದೆ. ‘ಸೆ. 25ರಂದು ಐಎಯು ಅಧಿಕೃತವಾಗಿ ಈ ಕುರಿತು ಘೋಷಣೆ ಮಾಡಿದ್ದು, ಪ್ರಶಂಸಾಪತ್ರ ನೀಡಿದೆ’ ಎಂದು ಅವರ ಪುತ್ರಿ ದುರ್ಗಾ ಜಸ್ರಾಜ್ ತಿಳಿಸಿದ್ದಾರೆ.

2006ರ ನವೆಂಬರ್ 11ರಂದು ಈ ಗ್ರಹವನ್ನು ಪತ್ತೆ ಮಾಡಲಾಗಿದೆ. ಆಗ ಇದಕ್ಕೆ ‘2006ವಿಪಿ32‘ ಎಂದು ಕರೆಯಲಾಗಿತ್ತು. ಈಗ ಜಸ್ರಾಜ್ ಅವರ ಜನ್ಮದಿನಾಂಕ (28–01/30)ವನ್ನು ಉಲ್ಟಾ ಬರೆದಾಗ 300128 ಆಗುತ್ತದೆ. ಐಎಯುನ ವೆಬ್ಸೈಟ್ನಲ್ಲಿ ಈ ಸಂಖ್ಯೆಯನ್ನು ನಮೂದಿಸಿದಾಗ ‘ಪಂಡಿತ್ಜಸ್ರಾಜ್’ ಗ್ರಹದ ಚಿತ್ರ ಹಾಗೂ ವಿವರಗಳು ಲಭ್ಯವಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.