ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಪುರ | 50ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಇ–ಮೇಲ್; ಆತಂಕ

Published 13 ಮೇ 2024, 14:07 IST
Last Updated 13 ಮೇ 2024, 14:07 IST
ಅಕ್ಷರ ಗಾತ್ರ

ಜೈಪುರ: ಇಲ್ಲಿನ 50ಕ್ಕೂ ಹೆಚ್ಚು ಶಾಲೆಗಳಿಗೆ ಸೋಮವಾರ ಇ–ಮೇಲ್‌ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಸುದ್ದಿ ಹರಡುತ್ತಿದ್ದಂತೆ, ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಆತಂಕಕ್ಕೆ ಒಳಗಾದರು.

ಬೆದರಿಕೆ ಪತ್ರದ ಹಿಂದೆಯೇ ಶಾಲೆಗಳಲ್ಲಿ ತೀವ್ರ ತಪಾಸಣೆಯನ್ನು ನಡೆಸಲಾಯಿತು. ಆದರೆ, ಯಾವುದೇ ಸ್ಫೋಟಕ ಅಥವಾ ಶಂಕಾಸ್ಪದ ಪರಿಕರ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಜೈಪುರದಲ್ಲಿ 2008ರಲ್ಲಿ ಇದೇ ದಿನ ಸರಣಿ ಬಾಂಬ್‌ ಸ್ಫೋಟ ಸಂಭವಿಸಿತ್ತು. ಆಗ ಸುಮಾರು 71 ಜನರು ಸತ್ತಿದ್ದು, 180 ಜನರು ಗಾಯಗೊಂಡಿದ್ದರು. ಅದರ 16ನೇ ವರ್ಷದ ದಿನದಂದೇ ಶಾಲೆಗಳಿಗೆ ಬೆದರಿಕೆ ಕರೆ ಬಂದಿರುವುದು ಗಮನಾರ್ಹ.

ಮೊದಲ ಬೆದರಿಕೆ ಇ–ಮೇಲ್ ತಿಲಕ್ ನಗರದಲ್ಲಿರುವ ಖಾಸಗಿ ಶಾಲೆಗೆ ಬಂದಿತು. ನಂತರ ಮಾನಕ್‌ ಚೌಕ್, ವೈಶಾಲಿ ನಗರ, ವಿದ್ಯಾಧರ ನಗರ, ನಿವಾರು ರೋಡ್, ಟೋಂಕ್ ರೋಡ್‌ನಲ್ಲಿರುವ ಖಾಸಗಿ ಶಾಲೆಗಳಿಗೂ ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT