ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸತ್‌ ಭದ್ರತಾ ಲೋಪ: ವಕೀಲರನ್ನು ಭೇಟಿ ಮಾಡಲು ನೀಲಂ ದೇವಿಗೆ ಅನುಮತಿ

Published 23 ಡಿಸೆಂಬರ್ 2023, 2:30 IST
Last Updated 23 ಡಿಸೆಂಬರ್ 2023, 2:30 IST
ಅಕ್ಷರ ಗಾತ್ರ

ಜಿಂದ್‌ (ಹರಿಯಾಣ): ಸಂಸತ್ತಿನ ಭದ್ರತಾ ಲೋಪ ಪ್ರಕರಣದಲ್ಲಿ ಬಂಧಿತರಾಗಿರುವ ಆರು ಜನರಲ್ಲಿ ಒಬ್ಬರಾದ ನೀಲಂ ದೇವಿಗೆ ವಕೀಲರನ್ನು ಭೇಟಿಯಾಗಲು ನ್ಯಾಯಾಲಯ ಅನುಮತಿ ನೀಡಿದೆ ಎಂದು ಆಕೆಯ ಕುಟುಂಬ ತಿಳಿಸಿದೆ.

ನೀಲಂ ಅವರು ಹರಿಯಾಣದ ಜಿಂದ್‌ನ ಘಾಸೊ ಖುರ್ದ್‌ ಗ್ರಾಮದ ನಿವಾಸಿಯಾಗಿದ್ದಾರೆ. ಡಿಸೆಂಬರ್‌ 13 ರಂದು ನಡೆದ ಸಂಸತ್ತಿನ ಭದ್ರತಾ ಉಲ್ಲಂಘನೆಯ ಘಟನೆಗೆ ಸಂಬಂಧಿಸಿದಂತೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ನ್ಯಾಯಾಲಯವು ನೀಲಂಗೆ ತನ್ನ ವಕೀಲರನ್ನು ಭೇಟಿ ಮಾಡಲು ಅನುಮತಿ ನೀಡಿದೆ. ಆದರೆ, ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ ಎಂದು ನೀಲಂ ಸಹೋದರ ರಾಮ್‌ನಿವಾಸ್‌ ಹೇಳಿದ್ದಾರೆ.

ಸಂಸತ್ತಿನ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್‌ ಶರ್ಮಾ, ಮನೋರಂಜನ್‌ ಡಿ. ಅಮೋಲ್‌ ಧನರಾಜ್‌ ಶಿಂಧೆ, ಲಲಿತ್‌ ಝಾ, ನೀಲಂ ದೇವಿ ಮತ್ತು ಮಹೇಶ್‌ ಕುಮಾವತ್‌ ಸೇರಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಂಸತ್ ಭವನದ ಎದುರು ಬಣ್ಣದ ಅನಿಲ ಹೊಗೆ ಸಿಂಪಡಿಸಿ ಘೋಷಣೆ ಕೂಗಿದ ಆರೋಪದ ಮೇಲೆ ನೀಲಂ ದೇವಿ ಹಾಗೂ ಅಮೋಲ್‌ ಧನರಾಜ್‌ ಶಿಂಧೆ ಅವರನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT