ಪಣಜಿ: ಗೋವಾ ಮುಖ್ಯಮಂತ್ರಿಮನೋಹರ ಪರ‍್ರೀಕರ್ ಅವರು ದೆಹಲಿಯ ಏಮ್ಸ್‌ಗೆದಾಖಲಾಗಿದ್ದರೂ, ಅಲ್ಲಿಂದಲೇ ಕಡತಗಳನ್ನು ಪರಿಶೀಲಿಸುತ್ತಿರುವುದರಿಂದ, ಆಡಳಿತಾತ್ಮಕ ಕಾರ್ಯಗಳಿಗೆ ಯಾವುದೇ ಅಡ್ಡಿಯಾಗಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸುದಿನ್ ಧವಳೀಕರ್ ಶನಿವಾರ ಹೇಳಿದ್ದಾರೆ.

‘ಪರ‍್ರೀಕರ್ ನಿರ್ದೇಶ ನದಂತೆ ಪ್ರತಿ ಬುಧವಾರ ಸಂಪುಟ ಸದಸ್ಯರು ಪರಿಶೀಲನಾ ಸಭೆ ನಡೆಸಿ, ಆಡಳಿತಾತ್ಮಕ ವಿಷಯಗಳನ್ನು ಚರ್ಚಿಸುತ್ತಾರೆ. ಸಭೆಯಲ್ಲಿ ಮಂಡಿಸಲಾದ ವಿಷಯಗಳ ಕುರಿತು ನಂತರ ಅವರಿಗೆ ವರದಿ ಸಲ್ಲಿಸಲಾಗುತ್ತದೆ’ ಎಂದು ವಿವರಿಸಿದ್ದಾರೆ.

‘ನಾವು ಎಲ್ಲ ಸಚಿವರೂ ಸಮರ್ಥರಾಗಿದ್ದು ರಾಜ್ಯದ ಎಲ್ಲ ವಿಷಯಗಳನ್ನೂ ನಿರ್ವಹಿಸುತ್ತಿದ್ದೇವೆ. ಆಡಳಿತಾತ್ಮಕ ಕಾರ್ಯದ ಮೇಲ್ವಿಚಾರಣೆಯನ್ನು ಮುಖ್ಯ ಕಾರ್ಯದರ್ಶಿ ನೋಡಿಕೊಳ್ಳುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.