ಪಟ್ನಾ: ಅಹಮದಾಬಾದ್ನಿಂದ ಪಟ್ನಾಗೆ ಸಂಚರಿಸುತ್ತಿದ್ದ ಇಂಡಿಗೊ ವಿಮಾನಕ್ಕೆ ಬುಧವಾರ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ.

192 ಪ್ರಯಾಣಿಕರಿದ್ದ ವಿಮಾನವು, ಮಧ್ಯಾಹ್ನ 12.45ಕ್ಕೆ ಜಯಪ್ರಕಾಶ್ ನಾರಾಯಣ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು.

ಬೆದರಿಕೆಯ ಕರೆ ಬಂದೊಡನೆ ಅಧಿಕಾರಿಗಳು ಮುನ್ನೆಚ್ಚರಿಕೆಯಿಂದ ಪಟ್ನಾ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯಲು ಅವಕಾಶ ಕಲ್ಪಿಸಿದರು. ಭದ್ರತಾ ಸಿಬ್ಬಂದಿ, ಬಾಂಬ್ ತಪಾಸಣಾ ದಳವು ಒಂದು ತಾಸಿಗೂ ಹೆಚ್ಚಿನ ಅವಧಿ ತಪಾಸಣೆ ನಡೆಸಿತು.

ವಿಮಾನದಲ್ಲಿ ಯಾವುದೇ ಸ್ಫೋಟಕ ವಸ್ತು ಹಾಗೂ ಅನುಮಾನಾಸ್ಪದ ವಸ್ತು ಕಂಡು ಬರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹುಸಿ ಬೆದರಿಕೆ ಬಗ್ಗೆ ತನಿಖೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.