ಈ ಸಂಬಂಧ ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣಗಳಿಗೆ ಪತ್ರ ಬರೆದಿರುವ ಸಚಿವಾಲಯವು,‘ಜಗತಿನಾದ್ಯಂತ ವಿವಿಧ ವಿಮಾನಯಾನ ಸಂಸ್ಥೆಗಳು ತಮ್ಮ ದೇಶಕ್ಕೆ ಸೇರಿದ ಸಂಗೀತವನ್ನು ತಮ್ಮ ವಿಮಾನಗಳಲ್ಲಿ ಬಿತ್ತರಿಸುತ್ತದೆ. ಉದಾಹರಣೆಗೆ ಅಮೆರಿಕದ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳಲ್ಲಿ ಜ್ಯಾಸ್ ಸಂಗೀತವನ್ನು ಪ್ರಸಾರ ಮಾಡಿದರೆ, ಮಧ್ಯ ಪೂರ್ವ ದೇಶಗಳ ವಿಮಾನಯಾನ ಸಂಸ್ಥೆಗಳು ಅರಬ್ ಸಂಗೀತವನ್ನು ಬಿತ್ತರಿಸುತ್ತದೆ’ ಎಂದು ಹೇಳಿದೆ.