ನವದೆಹಲಿ: ಸನಾತನ ಧರ್ಮ ಕುರಿತು ‘ದ್ವೇಷ ಭಾಷಣ’ ಮಾಡಿರುವ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಮತ್ತು ಸಂಸದ ಎ.ರಾಜಾ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಕೋರಿ ಸುಪ್ರಿಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.
ವಕೀಲ ವಿನೀತ್ ಜಿಂದಾಲ್ ಅರ್ಜಿಯನ್ನು ಸಲ್ಲಿಸಿದ್ದು, ‘ಇವರ ಹೇಳಿಕೆಯಿಂದ ಸನಾತನ ಧರ್ಮ ಪಾಲಿಸುತ್ತಿರುವ ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಅವರು ಬಳಸಿರುವ ಪದಗಳು, ಸನಾತನ ಧರ್ಮ ಕುರಿತ ಅವರ ದ್ವೇಷವನ್ನು ಬಿಂಬಿಸುತ್ತಿವೆ. ಧರ್ಮದ ಆಧಾರದಲ್ಲಿ ಪರಸ್ಪರ ದ್ವೇಷ ಮೂಡಿಸುವುದು‘ ಎಂದು ತಿಳಿಸಿದ್ದಾರೆ. ವಕೀಲ ರಾಜ್ ಕಿಶೋರ್ ಚೌಧರಿ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.