ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರಿಂದ ಶೌಚಗುಂಡಿ ಶುಚಿ, ರಾಜ್ಯಗಳಿಂದ ಬಾರದ ಉತ್ತರ: ಸುಪ್ರೀಂ ಗರಂ

ಕಾರ್ಮಿಕರಿಂದ ಶೌಚಗುಂಡಿ ಶುಚಿ
Last Updated 22 ಮಾರ್ಚ್ 2021, 12:16 IST
ಅಕ್ಷರ ಗಾತ್ರ

ನವದೆಹಲಿ: ಶೌಚಗುಂಡಿ ಶುಚಿಗೊಳಿಸುವ ಕಾರ್ಮಿಕರ (ಮ್ಯಾನುಯಲ್‌ ಸ್ಕ್ಯಾವೆಂಜಿಂಗ್‌) ಸಾವಿನ ಕುರಿತಂತೆ ಪ್ರತಿಕ್ರಿಯೆ ದಾಖಲಿಸಲು ರಾಜ್ಯಗಳಿಗೆ ಒತ್ತಾಯಿಸಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂಕೋರ್ಟ್‌, ಈ ಕುರಿತು ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಮುಂದುವರಿಸುವುದಾಗಿ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್‌ ಅವರನ್ನೊಳಗೊಂಡ ನ್ಯಾಯಪೀಠವು ಈ ಕುರಿತು ವಿಚಾರಣೆಯನ್ನು ಆಗಸ್ಟ್‌ ಮೂರನೇ ವಾರ ನಡೆಸುವುದಾಗಿ ಹೇಳಿತು.

ಸೋಮವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ, ‘ಕ್ರಿಮಿನಲ್ ಜಸ್ಟೀಸ್ ಸೊಸೈಟಿ ಆಫ್ ಇಂಡಿಯಾ’ ಎನ್‌ಜಿಒ ಪರ ಹಾಜರಾದ ವಕೀಲೆ ಅಶಿಮಾ ಮಾಂಡ್ಲಾ, ದೇಶದಲ್ಲಿ ಪ್ರತಿ ಐದು ದಿನಗಳಿಗೊಬ್ಬ ಶೌಚ ಗುಂಡಿ ಶುಚಿಗೊಳಿವ ಕಾರ್ಮಿಕಬಲಿಯಾಗುತ್ತಿದ್ದಾನೆ. ಈ ವಿಷಯವು ರಾಜ್ಯಸಭೆಯಲ್ಲೂ ಚರ್ಚೆಯಾಗಿದೆ ಎಂದು ತಿಳಿಸಿದರು.

2019ರ ಫೆಬ್ರುವರಿಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ನೋಟಿಸ್‌ಗೆ 40ಕ್ಕೂ ಹೆಚ್ಚಿನ ಪ್ರತಿಕ್ರಿಯೆ ಬರಬೇಕಿತ್ತು. ಆದರೆ13 ರಾಜ್ಯಗಳು ಮಾತ್ರ ಪ್ರಮಾಣ ಪತ್ರ ಸಲ್ಲಿಸಿವೆ ಎಂದು ಮಾಂಡ್ಲಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT