ಮದುರೈ: ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರವು ಬಡವರು, ಯುವಜನರು, ರೈತರಿಂದ ಕಸಿಯುತ್ತಿದೆ. ಇಂಥ ಭ್ರಷ್ಟ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕು ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದರು.

ಎನ್ಡಿಎ ರ್ಯಾಲಿ ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ‘ತಮಿಳುನಾಡಿನಲ್ಲಿ ಎನ್ಡಿಎಯನ್ನು ಅಧಿಕಾರಕ್ಕೆ ತರಲು ಜನರು ನಿರ್ಧರಿಸಿದ್ದಾರೆ. ದಕ್ಷ ಮತ್ತು ಪ್ರಮಾಣಿಕ ಸರ್ಕಾರ ಸ್ಥಾಪಿಸುವುದಾಗಿ ನಾನು ಭರವಸೆ ನೀಡುತ್ತೇನೆ’ ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದರು. ‘ಈ ಹಿಂದೆ ಕಾಂಗ್ರೆಸ್–ಡಿಎಂಕೆ ನೇತೃತ್ವದ ಮೈತ್ರಿ ಸರ್ಕಾರವು ‘ಜಲ್ಲಿಕಟ್ಟು’ ನಿಷೇಧಿಸಿತ್ತು. ಬಿಜೆಪಿ ಸರ್ಕಾರವು ಆ ನಿಷೇಧವನ್ನು ತೆರವುಗೊಳಿಸಿತು. ಸಂಸತ್ತಿನಲ್ಲಿ ‘ಸೆಂಗೋಲ್’(ರಾಜದಂಡ) ಸ್ಥಾಪಿಸುವ ಮೂಲಕ ತಮಿಳು ಸಂಸ್ಕೃತಿಗೆ ಗೌರವ ನೀಡಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.