ನವದೆಹಲಿ: ಕೃಷಿ, ಪರಿಸರ ಸಂರಕ್ಷಣೆ ಮತ್ತು ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣ ಸೇರಿದಂತೆ ವಿವಿಧ ವಲಯಗಳಲ್ಲಿ ಕೃತ ಬುದ್ಧಿಮತ್ತೆ (ಎ.ಐ) ಬಳಕೆಯ ಸಾಧ್ಯತೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಎ.ಐ ಮತ್ತು ಡೀಪ್ಟೆಕ್ ನವೋದ್ಯಮಗಳ ಸಿಇಒಗಳ ಜೊತೆ ಶುಕ್ರವಾರ ಚರ್ಚೆ ನಡೆಸಿದರು.

ಪ್ರಧಾನಿಯೊಂದಿಗೆ ದುಂಡುಮೇಜಿನ ಸಭೆ ನಡೆಸಿದ 16 ಎ.ಐ ಮತ್ತು ನವೋದ್ಯಮಗಳ ಸ್ಥಾಪಕರು ಮತ್ತು ಸಿಒಒಗಳು ತಮ್ಮ ಯೋಜನೆಗಳನ್ನು ಪ್ರಸ್ತುತ ಪಡಿಸಿದರು.

ಬಲವಾದ ದತ್ತಾಂಶ ನಿರ್ವಹಣೆ, ಸುಳ್ಳು ಮಾಹಿತಿಗಳ ನಿಗ್ರಹ ಮತ್ತು ಭಾರತದ ಅಗತ್ಯತೆಗಳಿಗೆ ಅನುಗುಣವಾದ ತಂತ್ರಜ್ಞಾನಗಳ ಅಗತ್ಯತೆಯನ್ನು ಮೋದಿ ಒತ್ತಿ ಹೇಳಿದರು.

ಬಾಹ್ಯಕಾಶ ವಲಯದಲ್ಲಿ ಖಾಸಗಿ ಸಹಭಾಗಿತ್ವವನ್ನು ವಿಸ್ತರಿಸುವ ಬಗ್ಗೆ ಮತ್ತು ಭಾರತದ ನವೋದ್ಯಮದ ಬಗ್ಗೆ ಹೂಡಿಕೆದಾರರ ಆಸಕ್ತಿ ಬಗ್ಗೆ ಮೋದಿ ಮಾತನಾಡಿದರು.

ಎ.ಐ ಸುಧಾರಣೆಗೆ ಪೂರಕ ವಾತಾವರಣ ಮತ್ತು ಬೆಂಬಲವನ್ನು ಭಾರತ ನೀಡುತ್ತಿದೆ ಹಾಗೂ ಜಾಗತಿಕ ಮಟ್ಟದಲ್ಲಿ ಎ.ಐ ವಲಯದಲ್ಲಿ ತನ್ನ ಇರುವಿಕೆಯನ್ನು ತೋರಿಸುತ್ತಿದೆ ಎಂದು ನವೋದ್ಯಮಿಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.