ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Engineer's Day: ಅಭಿವೃದ್ಧಿಗೆ ಜೀವ ತುಂಬುವ ಎಂಜಿನಿಯರ್‌ಗಳು: PM ಮೋದಿ ಅಭಿನಂದನೆ

Published : 15 ಸೆಪ್ಟೆಂಬರ್ 2024, 4:45 IST
Last Updated : 15 ಸೆಪ್ಟೆಂಬರ್ 2024, 4:45 IST
ಫಾಲೋ ಮಾಡಿ
Comments

ನವದೆಹಲಿ: ಆಧುನಿಕ ಜಗತ್ತಿಗೆ ಜೀವ ತುಂಬುವ, ಅಭಿವೃದ್ಧಿಗಾಗಿ ಹೊಸತನ್ನು ಯೋಜಿಸುವವರು ಎಂಜಿನಿಯರ್‌ಗಳು. ಭಾರತ ಕಂಡ ಶ್ರೇಷ್ಠ ಎಂಜಿನಿಯರ್‌ಗಳಲ್ಲಿ ಒಬ್ಬರಾದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನವಾದ ಸೆ.15ರಂದು ಪ್ರತಿ ವರ್ಷ ‘ಎಂಜಿನಿಯರ್ಸ್‌ ಡೇ’ ಎಂದು ಆಚರಿಸಲಾಗುತ್ತದೆ.

ಇಂಜಿನಿಯರ್‌ಗಳು ಸಮಾಜದ ಮೂಲಸೌಕರ್ಯದ ಬೆನ್ನೆಲುಬು ಎಂತಲೇ ಹೇಳಬಹುದು. ರಸ್ತೆಗಳು, ಸೇತುವೆಗಳು, ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸುವುದರಿಂದ ಹಿಡಿದು ಜೀವ ಉಳಿಸುವ ವೈದ್ಯಕೀಯ ಸಾಧನಗಳನ್ನು ವಿನ್ಯಾಸಗೊಳಿಸುವುದು, ಅತ್ಯಾಧುನಿಕ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಆಧುನಿಕತೆ ಪ್ರಗತಿಯ ಹಿಂದಿನ ಶಕ್ತಿಯಾಗಿದ್ದಾರೆ.

ದೇಶ ಕಟ್ಟುವ ಎಂಜಿನಿಯರ್‌ಗಳಿಗೆ ಶುಭ ಕೋರಿರುವ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. 'ಪ್ರತಿ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸುತ್ತಿರುವ, ಆವಿಷ್ಕಾರ ಮತ್ತು ನಿರ್ಣಾಯಕ ಸವಾಲುಗಳನ್ನು ಪರಿಹರಿಸುವ ಎಂಜಿನಿಯರ್‌ಗಳಿಗೆ ಶುಭಾಶಯಗಳು. ಎಂಜಿನಿಯರಿಂಗ್‌ಗೆ ಸರ್ ಎಂ. ವಿಶ್ವೇಶ್ವರಯ್ಯ ಅವರು ನೀಡಿದ ಕೊಡುಗೆ ಅಪಾರ’ ಎಂದು ವಿಶ್ವೇಶ್ವರಯ್ಯ ಅವರನ್ನು ಸ್ಮರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT