ನುಸುಳುಕೋರರಿಗೆ ಅಸ್ಸಾಂ ಭೂಮಿ ಬಿಟ್ಟುಕೊಟ್ಟಿದ್ದ ಕಾಂಗ್ರೆಸ್!
‘ಈಶಾನ್ಯ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಚುನಾವಣೆ ಸಮಯದಲ್ಲಿ ಮತ ಪಡೆಯುವುದಕ್ಕಾಗಿ ಅಸ್ಸಾಂನ ಭೂಮಿಯನ್ನು ನುಸುಳುಕೋರರಿಗೆ ಬಿಟ್ಟುಕೊಟ್ಟಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು. ಚುನಾವಣೆ ನಡೆಯಲಿರುವ ಅಸ್ಸಾಂಗೆ ಭೇಟಿ ನೀಡಿದ ನರೇಂದ್ರ ಮೋದಿ ಅವರು ಇಲ್ಲಿ ಆಯೋಜಿಸಿದ್ದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದಾಗ ಒಳನುಸುಳುವಿಕೆ ಹೆಚ್ಚುತ್ತಿತ್ತು. ಅಕ್ರಮ ವಲಸಿಗರು ಕಾಡುಪ್ರಾಣಿಗಳ ಕಾರಿಡಾರ್‌ಗಳು ಮತ್ತು ಸಾಂಪ್ರದಾಯಿಕ ಸಂಸ್ಥೆಗಳನ್ನು ಅತಿಕ್ರಮಿಸಿಕೊಳ್ಳುವ ಪ್ರಮಾಣವೂ ಹೆಚ್ಚಾಗಿತ್ತು’ ಎಂದು ಪ್ರಧಾನಿ ದೂರಿದರು..