ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯಲ್ಲಿರುವ ಕೇಂದ್ರ ಸಚಿವ ಎಲ್. ಮುರುಗನ್ ಅವರ ನಿವಾಸದಲ್ಲಿ ಇಂದು (ಬುಧವಾರ) ಸಂಕ್ರಾಂತಿ (ಪೊಂಗಲ್) ಆಚರಣೆಯಲ್ಲಿ ಭಾಗವಹಿಸಲಿದ್ದಾರೆ.

ಪ್ರಧಾನಮಂತ್ರಿ ಮೋದಿಯವರು, ದೇಶದ ಜನರಿಗೆ ಮಕರ ಸಂಕ್ರಾಂತಿಯ ಶುಭಾಶಯ ತಿಳಿಸಿದ್ದು, ದೇಶದ ನಾಗರಿಕರ ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿನೆ ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿ ಪೋಸ್ಟ್

‘ದೇಶದ ವಿವಿಧ ಭಾಗಗಳಲ್ಲಿ ಪವಿತ್ರ ಸಂಕ್ರಾಂತಿ ಹಬ್ಬವನ್ನು ಸ್ಥಳೀಯ ಪದ್ಧತಿ ಮತ್ತು ಸಂಪ್ರದಾಯಗಳ ಪ್ರಕಾರ ಆಚರಿಸಲಾಗುತ್ತದೆ. ಪ್ರತಿಯೊಬ್ಬರ ಸಂತೋಷ, ಸಮೃದ್ಧಿ ಮತ್ತು ಅತ್ಯುತ್ತಮ ಆರೋಗ್ಯಕ್ಕಾಗಿ ನಾನು ಸೂರ್ಯ ದೇವರನ್ನು ಪ್ರಾರ್ಥಿಸುತ್ತೇನೆ. ಸೂರ್ಯ ದೇವರು ನಿಮಗೆ ಸಕಲವನ್ನು ಕರುಣಿಸಲಿ’ ಎಂದು ಎಕ್ಸ್ ಮೂಲಕ ಶುಭ ಹಾರೈಸಿದ್ದಾರೆ.
.ಭಾರತ–ಬಾಂಗ್ಲಾದೇಶ ರೈಲ್ವೆ ಯೋಜನೆಗೆ ನ.1ರಂದು ಪ್ರಧಾನಿ ಮೋದಿ ಹಸಿರು ನಿಶಾನೆ.2025 ಸುಧಾರಣೆಗಳ ವರ್ಷ; ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದ ಭಾರತ: ಪ್ರಧಾನಿ ಮೋದಿ.
‘ಸೂರ್ಯ ಮಕರ ರಾಶಿಯಲ್ಲಿದ್ದಾನೆ. ಉತ್ತರಾಯಣದಲ್ಲಿ, ಪುಣ್ಯ ಪ್ರಾಪ್ತಿಯಾಗಲಿದೆ. ಈ ಸಂದರ್ಭದಲ್ಲಿ ಎಲ್ಲಾ ಪಾಪಗಳನ್ನು ನಾಶವಾಗುತ್ತವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.