ನವದೆಹಲಿ: ಹುಲಿಗಳ ಯೋಜನೆ (ಟೈಗರ್ ಪ್ರಾಜೆಕ್ಟ್) 50 ವರ್ಷ ಪೂರೈಸಿದ ಆಚರಣೆ ಮತ್ತು ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ಜಾಗತಿಕವಾಗಿ ಪ್ರದರ್ಶಿಸಲು ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 9 ರಂದು ಮೈಸೂರಿನಲ್ಲಿ ಮೂರು ದಿನಗಳ ಮೆಗಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಮೋದಿ ಇತ್ತೀಚಿನ ಹುಲಿ ಗಣತಿಯ ವರದಿ, 'ಅಮೃತ್ ಕಾಲ' ಸಮಯದಲ್ಲಿ ಹುಲಿ ಸಂರಕ್ಷಣೆಗಾಗಿ ಸರ್ಕಾರದ ದೃಷ್ಟಿಕೋನ ಮತ್ತು ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್ಟಿಸಿಎ) ಸದಸ್ಯ ಕಾರ್ಯದರ್ಶಿ ಎಸ್. ಪಿ ಯಾದವ್ ಹೇಳಿದ್ದಾರೆ.

ಏಪ್ರಿಲ್ 1, 1973 ರಂದು ಹುಲಿ ಸಂರಕ್ಷಣೆಯನ್ನು ಉತ್ತೇಜಿಸಲು ಭಾರತವು ಪ್ರಾಜೆಕ್ಟ್ ಟೈಗರ್ ಅನ್ನು ಪ್ರಾರಂಭಿಸಿತು. ಆರಂಭದಲ್ಲಿ, ಇದು 18,278 ಚದರ ಕಿಲೋಮೀಟರ್ಗಳಷ್ಟು ಹರಡಿರುವ ಒಂಬತ್ತು ಹುಲಿ ಸಂರಕ್ಷಿತ ಪ್ರದೇಶಗಳನ್ನು ಒಳಗೊಂಡಿತ್ತು.

ಪ್ರಸ್ತುತ, ಭಾರತವು 75,000 ಚದರ ಕಿಮೀ (ದೇಶದ ಭೌಗೋಳಿಕ ಪ್ರದೇಶದ ಸರಿಸುಮಾರು ಪ್ರತಿಶತ 2.4 ರಷ್ಟು) ಹುಲಿಗಳ ಆವಾಸಸ್ಥಾನವನ್ನು ಆವರಿಸಿರುವ 53 ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿದೆ.

ಪ್ರಸ್ತುತ ಭಾರತವು ಜಾಗತಿಕ ಹುಲಿಗಳ ಸಂಖ್ಯೆಯಲ್ಲಿ ಶೇಕಡ 70ರಷ್ಟನ್ನು ಹೊಂದಿದ್ದು, ಸುಮಾರು 3,000 ಹುಲಿಗಳು ಇಲ್ಲಿವೆ. ಹುಲಿಗಳ ಸಂಖ್ಯೆಯು ವರ್ಷಕ್ಕೆ ಆರು ಪ್ರತಿಶತದಷ್ಟು ಹೆಚ್ಚುತ್ತಿದೆ.

ಹುಲಿ ರಕ್ಷಿತಾರಣ್ಯಗಳು ದೇಶದ ಜೀವವೈವಿಧ್ಯ ಸಂರಕ್ಷಣೆಯ ಭಂಡಾರಗಳಾಗಿವೆ. ಇವುಗಳು ಪ್ರಾದೇಶಿಕ ನೀರಿನ ಭದ್ರತೆ ಮತ್ತು ಇಂಗಾಲದ ಪ್ರತ್ಯೇಕತೆಯನ್ನು ಖಚಿತಪಡಿಸುತ್ತವೆ. ಹೀಗಾಗಿ ಭಾರತದ ಹವಾಮಾನ ಬದಲಾವಣೆ ತಗ್ಗಿಸುವಿಕೆಯ ಗುರಿಗಳನ್ನು ಸಾಧಿಸುವಲ್ಲಿ ಕೊಡುಗೆ ನೀಡುತ್ತವೆ.

ಇವನ್ನೂ ಓದಿ: ನಮ್ಮನ್ನು ಬ್ರಿಟಿಷರೇ ಬೆದರಿಸಲಾಗಿಲ್ಲ, ಬಿಜೆಪಿಯಿಂದ ಸಾಧ್ಯವೇ?: ಕಾಂಗ್ರೆಸ್

ದೇಶದ ಧ್ವನಿಗಾಗಿ ಹೋರಾಟ, ಯಾವುದೇ ಬೆಲೆ ತೆರಲು ಸಿದ್ಧ: ರಾಹುಲ್ ಗಾಂಧಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.