ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಲೆಂಡ್‌ನಿಂದ ಉಕ್ರೇನ್‌ಗೆ ರೈಲಿನಲ್ಲಿ ಪ್ರಧಾನಿ ಮೋದಿ ಪ್ರಯಾಣ

Published : 21 ಆಗಸ್ಟ್ 2024, 2:36 IST
Last Updated : 21 ಆಗಸ್ಟ್ 2024, 2:36 IST
ಫಾಲೋ ಮಾಡಿ
Comments

ನವದೆಹಲಿ: ಇಂದಿನಿಂದ ಮೂರು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರು ಪೋಲೆಂಡ್‌ ಮತ್ತು ಉಕ್ರೇನ್‌ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. 

ಇಂದು ಪೋಲೆಂಡ್‌ಗೆ ತೆರಳುವ ಮೋದಿ ಅಲ್ಲಿಂದ ಆ.23ಕ್ಕೆ ಯುದ್ಧ ಪೀಡಿತ ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ.

ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ಧ ಮುಂದುವರಿದಿದ್ದು, ವೈಮಾನಿಕ ದಾಳಿಗಳು ನಡೆಯುವ ಹಿನ್ನೆಲೆಯಲ್ಲಿ ಪೋಲೆಂಡ್‌ನಿಂದ ಉಕ್ರೇನ್‌ಗೆ ತೆರಳಲು ಮತ್ತು ಅಲ್ಲಿಂದ ಪೋಲೆಂಡ್‌ಗೆ ವಾಪಸ್ಸಾಗಲು ಮೋದಿ ರೈಲಿನಲ್ಲಿ ಪ್ರಯಾಣ ಮಾಡಲಿದ್ದಾರೆ ಎಂದು ವರದಿಯಾಗಿದೆ.

‘ಟ್ರೇನ್‌ ಪೋರ್ಸ್‌ ಒನ್‌’ ಹೆಸರಿನ ವಿಶೇಷ ರೈಲಿನಲ್ಲಿ ಮೋದಿ ಒಟ್ಟು 20 ಗಂಟೆಗಳ ಕಾಲ ಪ್ರಯಾಣಿಸಲಿದ್ದಾರೆ. (ಕೀವ್‌ಗೆ ತೆರಳು 10 ಗಂಟೆ ಮತ್ತು ಪೋಲೆಂಡ್‌ಗೆ ವಾಪಸ್ಸಾಗಲು 10 ಗಂಟೆ).

ಅತ್ಯಾಧುನಿಕ ರೈಲು

ಮೋದಿ ಪ್ರಯಾಣಿಸುವ ಟ್ರೇನ್‌ ಪೋರ್ಸ್‌ ಒನ್‌ ರೈಲು ಐಷಾರಾಮಿ ಮತ್ತು ಸುರಕ್ಷತೆಯಿಂದ  ಕೂಡಿದ್ದು, ಈ ಹಿಂದೆ ಈ ರೈಲಿನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿ 200 ವಿದೇಶಿ ರಾಜತಾಂತ್ರಿಕ ನಿಯೋಗಗಳು ರೈಲಿನಲ್ಲಿ ಉಕ್ರೇನ್‌ಗೆ ಪ್ರಯಾಣಿಸಿವೆ.

7 ಗಂಟೆ ಉಕ್ರೇನ್‌ನಲ್ಲಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಆ. 23 ರಂದು ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ. ಈ ಮೂಲಕ 30 ವರ್ಷಗಳ ನಂತರ ಉಕ್ರೇನ್‌ಗೆ ಭಾರತೀಯ ಪ್ರಧಾನಿಯ ಮೊದಲ ಭೇಟಿಯಾಗಿದೆ. ಮೋದಿ ಕೀವ್‌ ನಗರದಲ್ಲಿ ಏಳು ಗಂಟೆಗಳ ಕಾಲ ಇರಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮೋದಿ ಭೇಟಿಯ ಕುರಿತು ಮಾಹಿತಿ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT