ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದೇ ರೀತಿಯಲ್ಲಾದರೂ ಅಧಿಕಾರ ಹಿಡಿಯುವುದು ಪ್ರಧಾನಿ ಮೋದಿ ಗುರಿ: ಪ್ರಿಯಾಂಕಾ

Published 27 ಮೇ 2024, 23:51 IST
Last Updated 27 ಮೇ 2024, 23:51 IST
ಅಕ್ಷರ ಗಾತ್ರ

ಶಿಮ್ಲಾ: ಯಾವುದೇ ರೀತಿಯಲ್ಲಾದರೂ ಅಧಿಕಾರ ಹಿಡಿಯುವುದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರ ಏಕೈಕ ಗುರಿಯಾಗಿದ್ದು, ಅದಕ್ಕಾಗಿ ಅವರು ಹಣಬಲ, ಶಾಸಕರಿಗೆ ಲಂಚ ನೀಡುವುದು, ದೇವರ ಹೆಸರಿನಲ್ಲಿ ಜನರ ದಿಕ್ಕುತಪ್ಪಿಸುವುದು ಮುಂತಾದ ಭ್ರಷ್ಟ ಪದ್ಧತಿಗಳಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸೋಮವಾರ ಹೇಳಿದರು.

ಹಿಮಾಚಲ ಪ್ರದೇಶದ ಚಂಬಾದಲ್ಲಿ ಅವರು ಚುನಾವಣಾ ಪ್ರಚಾರ ನಡೆಸಿದರು.

‘ಕಾಂಗ್ರೆಸ್ 55 ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಆದರೆ, ಶ್ರೀಮಂತ ಪಕ್ಷ ಆಗಲಿಲ್ಲ. ಆದರೆ, ಕೇವಲ 10 ವರ್ಷ ಆಡಳಿತ ನಡೆಸಿದ ಬಿಜೆಪಿ ಶ್ರೀಮಂತ ಪಕ್ಷವಾಯಿತು’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT