ನವದೆಹಲಿ: ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಯೋಜನೆಯಿಂದ ಹಿಡಿದು ಗಂಗಾನದಿ ಸ್ವಚ್ಚಗೊಳಿಸಲು ರೂಪಿಸಿರುವ ‘ನಮಾಮಿ ಗಂಗಾ ಯೋಜನೆ‘ವರೆಗೆ ಸಾರ್ವಜನಿಕ ಕಾರ್ಯಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಉಳಿತಾಯ ಮತ್ತು ತಮಗೆ ದೊರೆತ ಉಡುಗೊರೆಗಳ ಹರಾಜಿನಿಂದ ಬಂದ ₹103 ಕೋಟಿಗೂ ಹೆಚ್ಚು ಹಣವನ್ನುದೇಣಿಗೆಯಾಗಿ ನೀಡಿದ್ದಾರೆ!

ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ‘ತುರ್ತು ಸಂದರ್ಭಗಳಿಗೆ’ ನೆರವಾಗುವುದಕ್ಕಾಗಿ ಮಾರ್ಚ್ನಲ್ಲಿ ಆರಂಭವಾದ ‘ಪಿಎಂ ಕೇರ್ಸ್’ ನಿಧಿಗೆ ಆರಂಭಿಕ ಹಣವಾಗಿ ಪ್ರಧಾನಿಯವರು ₹2.5 ಲಕ್ಷ ದೇಣಿಗೆ ನೀಡಿದ್ದಾರೆ. ಇದು ಅವರು ಇತ್ತೀಚೆಗೆ ನೀಡಿರುವ ದೇಣಿಗೆಯಾಗಿದೆ ಎಂದುಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.

2019ರಲ್ಲಿ ಕುಂಭಮೇಳದಲ್ಲಿ ಸ್ವಚ್ಛತೆಯಲ್ಲಿ ತೊಡಗಿದ್ದ ಕಾರ್ಮಿಕರ ಕಲ್ಯಾಣಕ್ಕಾಗಿ ಮೋದಿಯವರು ತಮ್ಮ ಉಳಿತಾಯದ ಹಣದಿಂದ ₹21 ಲಕ್ಷ ನೀಡಿದ್ದರು. ಇದೇ ವರ್ಷದಲ್ಲಿ ದಕ್ಷಿಣ ಕೋರಿಯಾ ಸರ್ಕಾರ ‘ಸಿಯೋಲ್ ಪ್ರೈಜ್‘ ಪುರಸ್ಕಾರದ ಜತೆಗೆ ₹1.30 ಕೋಟಿ ನಗದನ್ನು ಪ್ರಧಾನಿ ಅವರಿಗೆ ನೀಡಿತ್ತು. ‘ಈ ಪುರಸ್ಕಾರದ ಪೂರ್ಣ ಹಣವನ್ನು ನಮಾಮಿ ಗಂಗಾ ಯೋಜನೆಗೆ ನೀಡುತ್ತಿದ್ದೇನೆ‘ ಎಂದು ಪ್ರಧಾನಿಯವರು ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.