ವಿಶ್ವಸಂಸ್ಥೆಯ 75ನೇ ಮಹಾ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಭಾಷಣ ಮಾಡಿದ್ದಾರೆ.

'ಸುಧಾರಣಾ ಪ್ರಕ್ರಿಯೆ ತಾರ್ಕಿಕ ಅಂತ್ಯ ಕಾಣವುದೇ ಎಂದು ಭಾರತದ ಜನರಿಂದು ಕಳಕಳಿ ಹೊಂದಿದ್ದಾರೆ. ವಿಶ್ವ ಸಂಸ್ಥೆಯ ನಿರ್ಧಾರ ಕೈಗೊಳ್ಳುವ ಸಂರಚನೆಯಿಂದ ಇನ್ನೂ ಎಷ್ಟು ಸಮಯ ಭಾರತವನ್ನು ಹೊರಗಿಡಲಾಗುತ್ತದೆ?' ಎಂದು ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.

ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ (ಶಾಶ್ವತವಲ್ಲದ) ರಾಷ್ಟ್ರವಾಗಿ ಸಮ್ಮಾನ್ (ಗೌರವ), ಸಂವಾದ, ಸಹಯೋಗ, ಶಾಂತಿ ಹಾಗೂ ಸಮೃದ್ಧಿ '5 ಎಸ್' ಕಡೆಗೆ ಗಮನ ಹರಿಸಲಿದೆ ಎಂದಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗದ ನಡುವೆ ಐತಿಹಾಸಿಕ 75ನೇ ವಿಶ್ವಸಂಸ್ಥೆಯ ಮಹಾ ಅಧಿವೇಶನ ನಡೆಯುತ್ತಿದೆ. ವಿಶ್ವಸಂಸ್ಥೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿವಿಧ ರಾಷ್ಟ್ರಗಳ ನಾಯಕರು ವರ್ಚುವಲ್ ಆಗಿ ಈ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಕಾರಣ ವಿಶ್ವದ ಯಾವ ರಾಷ್ಟ್ರದ ನಾಯಕರು, ಸಚಿವರು, ಅಧಿಕಾರಿಗಳು ಈ ಬಾರಿ ಅಧಿವೇಶನಕ್ಕೆ ಹಾಜರಾಗುವುದಿಲ್ಲ. ಎಲ್ಲರೂ ತಾವು ಮಂಡಿಸಬೇಕಾದ ವಿಚಾರವನ್ನು ವಿಡಿಯೊ ರೆಕಾರ್ಡ್ ಮಾಡಿ ಕಳುಹಿಸಿದ್ದಾರೆ, ಅವರೆಲ್ಲ ವರ್ಚುವಲ್ ಆಗಿ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆ. ಸೆಪ್ಟೆಂಬರ್ 29ರ ವರೆಗೂ ಮಹಾ ಅಧಿವೇಶನದ ಸಾಮಾನ್ಯ ಚರ್ಚೆ ನಡೆಯಲಿದೆ.

ಪ್ರಧಾನಿ ಮೋದಿ ಭಾಷಣದ ಲಿಂಕ್ ಇಲ್ಲಿದೆ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.