ನವದೆಹಲಿ: ಭೂಕಂಪ ಪೀಡಿತ ಟರ್ಕಿ ದೇಶದಲ್ಲಿ ನಿಯೋಜನೆಗೊಂಡಿರುವ ಭಾರತದ ನೆರವು ಮತ್ತು ವಿಪತ್ತು ನಿರ್ವಹಣೆ ತಂಡಗಳ ಕಾರ್ಯಾಚರಣೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಶ್ಲಾಘಿಸಿದ್ದಾರೆ.

ಟರ್ಕಿಯಿಂದ ಹಿಂತಿರುಗಿದ ತಂಡಗಳ ಸಿಬ್ಬಂದಿಯನ್ನು ಉದ್ದೇಶಿಸಿದ ಮಾತನಾಡಿದ ಅವರು, ‘ಕೆಲವೇ ವರ್ಷಗಳಲ್ಲಿ ಭಾರತವು ಸ್ವಾವಲಂಬಿ ದೇಶವಾಗಿ ತನ್ನ ಗುರುತನ್ನು ಸಾಬೀತುಪಡಿಸಿದ್ದು, ನಿಸ್ವಾರ್ಥವಾಗಿ ಇತರ ದೇಶಗಳಿಗೆ ಸಹಾಯ ಹಸ್ತ ಚಾಚುವಂತಾಗಿದೆ. ಭೂಕಂಪಪೀಡಿತ ಪ್ರದೇಶಗಳಲ್ಲಿ ನಮ್ಮ ದೇಶದ ತಂಡವು ಮಾನವೀಯತೆಯಿಂದ ಸೇವೆ ಮಾಡಿದ್ದು, ಇದರಿಂದ ಇಡೀ ದೇಶವೇ ಹೆಮ್ಮೆಪಡುವಂತಾಗಿದೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಭೂಕಂಪಪೀಡಿತ ಟರ್ಕಿಗೆ ಎಲ್ಲ ರೀತಿಯ ನೆರವು ನೀಡುವಂತೆ ಫೆ. 7ರಂದು ಮೋದಿ ಸೂಚಿಸಿದ್ದರು. ಅಂತೆಯೇ ಮೂರು ಎನ್‌ಡಿಆರ್‌ಎಫ್ ತಂಡಗಳನ್ನು ಅಲ್ಲಿಗೆ ಕಳುಹಿಸಲಾಗಿತ್ತು. ಭೂಕಂಪಪೀಡಿತ ಜನರಿಗೆ ವೈದ್ಯಕೀಯ ಸೇವೆ ಒದಗಿಸಲು ಭಾರತೀಯ ಸೇನೆಯು ವೈದ್ಯಕೀಯ ತಂಡವನ್ನೂ ನಿಯೋಜಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.