ನವದೆಹಲಿ:ಎರಡನೇ ಬಾರಿಗೆ ಪ್ರಧಾನಿಯಾಗಿ ಇಂದು ಸಂಜೆ ಅಧಿಕಾರ ಸ್ವೀಕರಿಸಲಿರುವನರೇಂದ್ರ ಮೋದಿಅವರು ಬೆಳಿಗ್ಗೆ ರಾಜ್ಘಾಟ್ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.
ಬಳಿಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ ನಿರ್ಮಿಸಲಾಗಿರುವ ‘ಸದೈವ್ ಅಟಲ್ ಸಮಾಧಿ’ಗೆ ತೆರಳಿ ಗೌರವ ಸಲ್ಲಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಕೆಲವು ಗಣ್ಯರು ಮೋದಿ ಜತೆಗಿದ್ದರು.
ಅಲ್ಲಿಂದ ನೇರವಾಗಿ ಇಂಡಿಯಾಗೇಟ್ನಲ್ಲಿರುವ ಯುದ್ಧಸ್ಮಾರಕಕ್ಕೆ ತೆರಳಿದ ಮೋದಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.