ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.

'ಏಮ್ಸ್‌ನಲ್ಲಿ ನನ್ನ ಮೊದಲ ಕೋವಿಡ್–19 ಲಸಿಕೆಯ ಡೋಸ್ ಹಾಕಿಸಿಕೊಂಡೆ. ಕೋವಿಡ್–19 ವಿರುದ್ಧದ ಜಾಗತಿಕ ಹೋರಾಟದಲ್ಲಿ ನಮ್ಮ ವೈದ್ಯರು ಹಾಗೂ ವಿಜ್ಞಾನಿಗಳು ಅಲ್ಪಾವಧಿಯಲ್ಲೇ ನಡೆಸಿದ ಕಾರ್ಯಾಚರಣೆ ಅಸಾಧಾರಣವಾದುದು. ಅರ್ಹರಿರುವ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ. ನಾವೆಲ್ಲರೂ ಜೊತೆಯಾಗಿ ಭಾರತವನ್ನು ಕೋವಿಡ್–19 ಮುಕ್ತವಾಗಿಸೋಣ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪುದುಚೇರಿ ಮೂಲದ ಸಿಸ್ಟರ್ ಪಿ.ನಿವೇದಾ ಪ್ರಧಾನಿಗೆ ಭಾರತ್ ಬಯೋಟೆಕ್‌ನ 'ಕೊವ್ಯಾಕ್ಸಿನ್' ಲಸಿಕೆ ಚುಚ್ಚಿದರು. ಪ್ರಧಾನಿ ಮೋದಿ ಎಡಗೈ ತೋಳಿಗೆ ಲಸಿಕೆ ಹಾಕಿಸಿಕೊಂಡರು.

ಇದನ್ನೂ ಓದಿ:60 ದಾಟಿದವರು, ಅನಾರೋಗ್ಯವಿರುವ 45ರ ಮೇಲಿನ 27 ಕೋಟಿ ಮಂದಿಗೆ ಲಸಿಕೆ: ಇಂದು ಚಾಲನೆ

ಕೋವಿಡ್–19 ತಡೆಯ ಎರಡನೇ ಹಂತದ ಲಸಿಕೆ ಕಾರ್ಯಕ್ರಮ ಸೋಮವಾರದಿಂದ (ಮಾರ್ಚ್ 1) ಆರಂಭವಾಗಿದ್ದು, ಜಗತ್ತಿನ ಅತ್ಯಂತ ದೊಡ್ಡ ಲಸಿಕೆ ಅಭಿಯಾನಕ್ಕೆ ಭಾರತವು ಚಾಲನೆ ನೀಡಿದೆ.

60 ವರ್ಷ ದಾಟಿದವರು ಮತ್ತು 2022ರ ಜನವರಿ 1ಕ್ಕೆ 60 ವರ್ಷ ತುಂಬುವವರು ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಲು ಅರ್ಹರಾಗಿದ್ದಾರೆ.ಬೇರೆ ರೋಗಗಳನ್ನು ಹೊಂದಿರುವ, 2022ರ ಜನವರಿ 1ಕ್ಕೆ 45 ವರ್ಷ ತುಂಬುವವರು ಮತ್ತು ಈಗಾಗಲೇ 45 ದಾಟಿದವರು ಕೂಡ ನೋಂದಣಿಗೆ ಅರ್ಹರು. 20 ಅನಾರೋಗ್ಯಗಳನ್ನು ಆರೋಗ್ಯ ಸಚಿವಾಲಯವು ಪಟ್ಟಿ ಮಾಡಿದೆ.

ಲಸಿಕೆ ನೋಂದಣಿಯ ಕೋ–ವಿನ್ 2.0 ಆ್ಯಪ್ ಅಥವಾ ಪೋರ್ಟಲ್ ಸೋಮವಾರ ಬೆಳಿಗ್ಗೆ 9 ಗಂಟೆಗೆ ಸಕ್ರಿಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.