ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ | ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ಪ್ರಧಾನಿ ಮೋದಿ ಮುಖ್ಯ ಯಜಮಾನ

Published 17 ಜನವರಿ 2024, 16:05 IST
Last Updated 17 ಜನವರಿ 2024, 16:05 IST
ಅಕ್ಷರ ಗಾತ್ರ

ವಾರಾಣಸಿ: ಜ.22 ರಂದು ನಡೆಯಲಿರುವ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯ ಯಜಮಾನರಾಗಿರಲಿದ್ದಾರೆ ಎಂದು ಪೂಜಾ ಕೈಂಕರ್ಯಗಳನ್ನು ನಡೆಸುವ ಪ್ರಧಾನ ಅರ್ಚಕ ಲಕ್ಷ್ಮಿಕಾಂತ್‌ ದೀಕ್ಷಿತ್‌ ತಿಳಿಸಿದ್ದಾರೆ.

ಯಜಮಾನ ಎಂದರೆ ಪೂಜೆಯ ಮುಖ್ಯ ಆತಿಥ್ಯ ವಹಿಸುವ ವ್ಯಕ್ತಿ. ಅವರೇ ಎಲ್ಲರ ಪರವಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ದೀಕ್ಷಿತ್‌ , ‘ಪ್ರಧಾನಿ ನರೇಂದ್ರ  ಮೋದಿಯವರು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಎಲ್ಲಾ ಕಾರ್ಯಕ್ರಮಗಳಿಗೆ ಯಜಮಾನರಾಗಿರಲಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಫೂರ್ವಭಾವಿ ವಿಧಿವಿಧಾನ ಕಾರ್ಯಕ್ರಮಗಳು ಆರಂಭವಾಗಿವೆ. ರಾಮನ ಮೂರ್ತಿಯನ್ನು ಗರ್ಭಗುಡಿಯೊಳಗೆ ಸ್ಥಾಪಿಸಿದ ಬಳಿಕವೇ ಎಲ್ಲಾ ರೀತಿಯ ಆಚರಣೆಗಳು ಮುಕ್ತಾಯಗೊಳ್ಳಲಿದೆ. ಅಲ್ಲದೆ ನಿನ್ನೆಯಿಂದ(ಜ.16) ಆರಂಭವಾದ ಅನುಷ್ಠಾನಗಳು ಜ.22ರವರೆಗೂ ಮುಂದುವರಿಯಲಿದೆ. ಪ್ರಾಣ ಪ್ರತಿಷ್ಠಾಪನೆಯ ದಿನ 11 ಪುರೋಹಿತರು ಎಲ್ಲಾ ದೇವತೆಗಳು ಮತ್ತು ದೇವರುಗಳನ್ನು ಆವಾಹನೆ ಮಾಡಲಿದ್ದಾರೆ ಎಂದು ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT