ನವದೆಹಲಿ: ಭಾರತದ ಆಪರೇಷನ್ ಸಿಂಧೂರ ಬಳಿಕ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳಾದ ಜೈಷ್-ಎ-ಮೊಹಮ್ಮದ್ (ಜೆಇಎಂ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ (ಎಚ್ಎಂ) ತಮ್ಮ ನೆಲೆಗಳನ್ನು ಪಾಕ್ ಆಕ್ರಮಿತ ಕಾಶ್ಮೀರದಿಂದ ಖೈಬರ್ ಪಖ್ತುಂಖ್ವಾ (ಕೆಪಿಕೆ) ಪ್ರಾಂತ್ಯಕ್ಕೆ ಸ್ಥಳಾಂತರಿಸಲು ಪ್ರಾರಂಭಿಸಿವೆ ಎಂದು ರಕ್ಷಣಾ ಮತ್ತು ಮಿಲಿಟರಿ ಮೂಲಗಳು ಶುಕ್ರವಾರ ತಿಳಿಸಿವೆ.
.ಆಪರೇಷನ್ ಸಿಂಧೂರ | ಉಗ್ರರು ಅಳುವುದನ್ನು ಜಗತ್ತೇ ನೋಡಿತು: ಪ್ರಧಾನಿ ಮೋದಿ.
ಇದು ಈ ಗುಂಪುಗಳ ಯುದ್ಧತಂತ್ರದ ಪ್ರತೀಕ. ಆಕ್ರಮಿತ ಕಾಶ್ಮೀರವು ಭಾರತದ ದಾಳಿಗೆ ಗುರಿಯಾಗಬಹುದು, ಅಫ್ಗಾನ್ ಗಡಿಗೆ ಸಮೀಪ ಇರುವುದರಿಂದ ಪಖ್ತುಂಖ್ವಾ ಪ್ರಾಂತ್ಯವು ಸುರಕ್ಷಿತ ಎಂದು ಆ ಕಡೆ ತಮ್ಮ ನೆಲೆಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆಪರೇಷನ್ ಸಿಂಧೂರದಲ್ಲಿ ಭಾರತವು ಬಹವಾಲ್ಪುರ್, ಮುರಿದ್ಕೆ, ಮುಜಫರಾಬಾದ್ ಮತ್ತು ಇತರ ಹಲವಾರು ಸ್ಥಳಗಳಲ್ಲಿದ್ದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು.

‘ಭಯೋತ್ಪಾದಕ ಗುಂಪುಗಳ ಈ ಚಳುವಳಿಯನ್ನು ಪಾಕಿಸ್ತಾನದ ರಾಜ್ಯ ಸರ್ಕಾರಗಳ ಸಂಪೂರ್ಣ ಅರಿವು ಮತ್ತು ನೇರ ಸಹಾಯದೊಂದಿಗೆ ನಡೆಸಲಾಗುತ್ತಿದೆ ಎಂದು ಮಾಹಿತಿಗಳು ಸೂಚಿಸುತ್ತವೆ’ ಒಂದು ಮೂಲ ಮಾಹಿತಿ ನೀಡಿದೆ.
.ಸಿಂಧೂರ: ಉಗ್ರವಾದ ವಿರುದ್ಧದ ಹೋರಾಟಕ್ಕೆ ನಿದರ್ಶನವಾಗಲಿದೆ; ರಾಷ್ಟ್ರಪತಿ ಮುರ್ಮು.
ಪಾಕಿಸ್ತಾನದ ಕೆಲವು ಸ್ಥಳಗಳಲ್ಲಿ ಇತ್ತೀಚೆಗೆ ಜೆಇಎಂ ಸಭೆಗಳು ಪೊಲೀಸ್ ರಕ್ಷಣೆಯಲ್ಲಿ ನಡೆದಿದೆ. ಜಮಿಯತ್ ಉಲೇಮಾ-ಎ–ಇಸ್ಲಾಂ (ಜೆಯುಐ) ನಂತಹ ರಾಜಕೀಯ-ಧಾರ್ಮಿಕ ಸಂಘಟನೆಗಳು ಇದರಲ್ಲಿ ಭಾಗಿಯಾಗಿವೆ ಎಂದು ಮೂಲಗಳು ತಿಳಿಸಿವೆ.

ಭಾರತದ ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳು ಜಂಟಿಯಾಗಿ ಸಿದ್ಧಪಡಿಸಿದ ದಾಖಲೆಯಲ್ಲಿ ಈ ಮಾಹಿತಿಗಳಿವೆ.

ಸೆಪ್ಟೆಂಬರ್ 14ರ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ಪ್ರಾರಂಭವಾಗುವ ಸುಮಾರು ಏಳು ಗಂಟೆಗಳ ಮೊದಲು ತನ್ನ ಸಾರ್ವಜನಿಕ ನೇಮಕಾತಿ ಅಭಿಯಾನವನ್ನು ಪಖ್ತುಂಖ್ವಾ ಪ್ರಾಂತ್ಯದ ಮನ್ಸೆಹ್ರಾ ಜಿಲ್ಲೆಯ ಗರ್ಹಿ ಹಬೀಬುಲ್ಲಾ ಪಟ್ಟಣದಲ್ಲಿ ಜೈಷ್ ಸಂಘಟನೆ ಮಾಡಿತ್ತು ಎಂದು ಮೂಲಗಳು ಹೇಳಿವೆ.
.'ಆಪರೇಷನ್ ಸಿಂಧೂರ' ಯಶಸ್ಸಿಗೆ ಬೆಂಗಳೂರಿನ ಕೊಡುಗೆಯಿದೆ: ಪ್ರಧಾನಿ ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.