ಚೆನ್ನೈ: ತಮಿಳುನಾಡಿನಲ್ಲಿ ‘ಅಕ್ಕಿ ವರ್ಗದ ಪಡಿತರ ಚೀಟಿ’ ಹೊಂದಿರುವವರಿಗೆ ಪೊಂಗಲ್ ಹಬ್ಬದ ಉಡುಗೊರೆಯಾಗಿ ₹3,000 ನಗದು ಮತ್ತು ವಿಶೇಷ ಕಿಟ್ ಅನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಗುರುವಾರ ಸಾಂಕೇತಿಕವಾಗಿ ವಿತರಿಸಿದರು.

ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳಿಗೆ ಈ ಉಡುಗೊರೆ ದೊರೆಯಲಿದೆ.

ಸುಗ್ಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅನುಕೂಲವಾಗಲಿ ಎಂದು ರಾಜ್ಯ ಸರ್ಕಾರ ಈ ಉಡುಗೊರೆ ನೀಡುವ ಕಾರ್ಯಕ್ಕೆ ಚಾಲನೆ ನೀಡಿದೆ. ಒಂದು ಕೆ.ಜಿ ಅಕ್ಕಿ, ಒಂದು ಕೆ.ಜಿ ಸಕ್ಕರೆ, ಒಂದು ಕಬ್ಬು, ಒಂದು ಧೋತಿ ಮತ್ತು ಒಂದು ಸೀರೆಯನ್ನು ವಿಶೇಷ ಕಿಟ್ ಒಳಗೊಂಡಿದೆ.

ತಮಿಳುನಾಡಿನಲ್ಲಿ 2.22 ಕೋಟಿ ಅಕ್ಕಿ ವರ್ಗದ ಪಡಿತರ ಚೀಟಿದಾರರಿದ್ದಾರೆ. ಈ ಕಾರ್ಯಕ್ರಮದಲ್ಲಿ ನಗದು ವಿತರಿಸಲು ಸರ್ಕಾರ ₹ 6,939 ಕೋಟಿ ಮೀಸಲಿಟ್ಟಿದೆ. ಅಲ್ಲದೆ ವಿಶೇಷ ಕಿಟ್ಗಾಗಿ ₹ 248.66 ಕೋಟಿ ಮಂಜೂರು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.