ಭುವನೇಶ್ವರ: ಕೋವಿಡ್ ನಂತರದ ತೊಂದರೆಗಳಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಡಿಯಾದ ಪ್ರಸಿದ್ಧ ಹಿನ್ನೆಲೆ ಗಾಯಕಿ ತಾಪು ಮಿಶ್ರಾ (36) ಅವರು ನಿಧನರಾಗಿದ್ದಾರೆ ಎಂದು ಅವರ ಸಂಬಂಧಿಕರು ಭಾನುವಾರ ತಿಳಿಸಿದ್ದಾರೆ.

ತಾಪು ಅವರ ತಂದೆ ಮೇ 19ರಂದು ಕೋವಿಡ್‌ನಿಂದ ಮೃತಪಟ್ಟಿದ್ದರು.

ಎರಡು ದಿನಗಳ ಹಿಂದೆ ಅವರಲ್ಲಿ ಆಮ್ಲಜನಕದ ಮಟ್ಟ ಗಣನೀಯವಾಗಿ (45) ಇಳಿಕೆ ಕಂಡು ಬಂದಿತ್ತು. ಹಾಗಾಗಿ ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಅವರ ಶ್ವಾಸಕೋಶವೂ ವ್ಯಾಪಕವಾಗಿ ಹಾನಿಗೊಳಗಾಗಿತ್ತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಅವರನ್ನು ಮೇ 19ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗಾಯಕಿಯ ಚಿಕಿತ್ಸೆಗಾಗಿಒಡಿಶಾದ ಸಂಸ್ಕೃತಿ ಇಲಾಖೆಯು ಕಲಾವಿದರ ಕಲ್ಯಾಣ ನಿಧಿಯಿಂದ ₹ 1 ಲಕ್ಷ ನೆರವು ನೀಡಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ತಾಪು ಮಿಶ್ರಾ ಅವರನ್ನು ಕೋಲ್ಕತ್ತದ ಆಸ್ಪತ್ರೆಯಲ್ಲಿ ದಾಖಲಿಸುವ ಯೋಜನೆಯನ್ನು ಅವರ ಕುಟುಂಬದವರು ಹೊಂದಿದ್ದರು.ಒಡಿಯಾ ಸಿನಿಮಾ (ಒಲಿವುಡ್) ಕ್ಷೇತ್ರದವರು ಮಿಶ್ರಾ ಅವರ ಚಿಕಿತ್ಸೆಗಾಗಿ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿದ್ದರು.150ಕ್ಕೂ ಹೆಚ್ಚು ಸಿನಿಮಾಗಳಿಗೆ ತಮ್ಮ ಸುಮಧುರ ಧ್ವನಿಯನ್ನು ನೀಡಿದ್ದ ಅವರು, ಎರಡು ದಶಕಗಳಲ್ಲಿ ಸಾಕಷ್ಟು ಭಜನೆಗಳನ್ನು ನಡೆಸಿಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.