ನೊಯಿಡಾ: ಮನಿ ಆರ್ಡರ್ಗಾಗಿ ಸಂದಾಯವಾದ ₹1,575 ನೀಡದೆ ವಂಚಿಸಿದ್ದ ನಿವೃತ್ತ ಸಬ್ ಪೋಸ್ಟ್ಮಾಸ್ಟರ್ಗೆ ನೊಯಿಡಾದ ಗೌತಮ್ ಬುದ್ಧ ನಗರ ನ್ಯಾಯಾಲಯವು 3 ವರ್ಷ ಜೈಲು ಹಾಗೂ ₹10 ಸಾವಿರ ದಂಡ ವಿಧಿಸಿದೆ.

ಗ್ರಾಹಕರೊಬ್ಬರಿಗೆ 32 ವರ್ಷಗಳ ಹಿಂದಿನ ಈ ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ. ಒಂದೊಮ್ಮೆ ₹10 ಸಾವಿರ ದಂಡ ಭರಿಸದಿದ್ದರೆ ಹೆಚ್ಚುವರಿಯಾಗಿ 3 ವರ್ಷ ಜೈಲು ಶಿಕ್ಷೆಯನ್ನು ಎದುರಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ವಂಚನೆ ಹಾಗೂ ಸರ್ಕಾರಿ ನೌಕರನಿಗೆ ಅಪರಾಧಿಕ ನಂಬಿಕೆ ದ್ರೋಹ ಪ್ರಕರಣದಲ್ಲಿ ಮಹೇಂದ್ರ ಕುಮಾರ್ ಶಿಕ್ಷೆಗೆ ಒಳಗಾದ ವ್ಯಕ್ತಿ.

ಆದೇಶ ಪ್ರಕಟಿಸುವ ಮುನ್ನ ‘ರಾಮ್ ಶಂಕರ್ ಪಟ್ನಾಯಕ್ ವರ್ಸಸ್ ಒಡಿಶಾ ರಾಜ್ಯ ಸರ್ಕಾರ’ ಪ್ರಕರಣದಲ್ಲಿ 1988ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನನ್ನು ನ್ಯಾಯಾಧೀಶರು ಉಲ್ಲೇಖಿಸಿದರು.

'ನಂಬಿಕೆ ದ್ರೋಹ ಎಸಗಿದ ವ್ಯಕ್ತಿಯ ಅಪರಾಧ ಸಾಬೀತಾದ ನಂತರ ಆ ಮೊತ್ತವನ್ನು ಹಿಂದಿರುಗಿಸಿದರೆ ಕೃತ್ಯವನ್ನೇ ಮರೆಯಲಾಗದು. ಒಂದೊಮ್ಮೆ ತಪ್ಪಿತಸ್ಥನು ಬಾಕಿ ಹಣವನ್ನು ಹಿಂದಿರುಗಿಸಿದರೆ, ಶಿಕ್ಷೆಯ ಪ್ರಮಾಣ ಕಡಿಮೆ ಮಾಡಬಹುದಷ್ಟೇ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಪ್ರಕರಣದ ಹಿನ್ನೆಲೆ: 1993ರ ಅ. 2ರಂದು ನಡೆದ ಘಟನೆಯ ಇದು. ನೊಯಿಡಾ ಸೆಕ್ಟರ್ 15ರ ನಿವಾಸಿ ಅರುಣ್ ಮಿಸ್ತ್ರಿ ಎಂಬುವವರು ₹1,500 ಅನ್ನು ಬಿಹಾರದಲ್ಲಿರುವ ತಮ್ಮ ತಂದೆ ಮದನ್ ಅವರಿಗೆ ಮನಿ ಆರ್ಡರ್ ಮೂಲಕ ಕಳುಹಿಸಿದ್ದರು. ಆ ಸಂದರ್ಭದಲ್ಲಿ ಸೆಕ್ಟರ್ 19ರ ಅಂಚೆ ಕಚೇರಿಯಲ್ಲಿ ಮಹೇಂದ್ರ ಕುಮಾರ್ ಎಂಬುವವರು ಸಬ್ ಪೋಸ್ಟ್ಮಾಸ್ಟರ್ ಆಗಿದ್ದರು.

ಅರುಣ್ ಅವರಿಗೆ ₹1,500 ಮತ್ತು ಅದಕ್ಕೆ ತಗಲುವ ಕಮಿಷನ್ ಶುಲ್ಕವಾಗಿ ₹75 ಅನ್ನು ತೆಗೆದುಕೊಂಡಿದ್ದರು. ಆದರೆ ಅದನ್ನು ಖಜಾನೆಗೆ ಬರಿಸಲಿಲ್ಲ. ಬದಲಿಗೆ, ನಕಲಿ ರಶೀದಿಯನ್ನು ಅರುಣ್ಗೆ ಮಹೇಂದ್ರ ಕುಮಾರ್ ನೀಡಿದ್ದರು. ಬಿಹಾರದಲ್ಲಿರುವ ತನ್ನ ತಂದೆಗೆ ಹಣ ತಲುಪದ ಕಾರಣ, 1994ರ ಜ. 3ರಂದು ಪೋಸ್ಟ್ ಮಾಸ್ಟರ್ ಸುರೇಶ್ ಚಂದ್ರ ಅವರಿಗೆ ಅರುಣ್ ದೂರು ನೀಡಿದ್ದರು.

ಈ ಕುರಿತು ಆಂತರಿಕ ತನಿಖೆ ನಡೆಸಲಾಗಿತ್ತು. ಅದರಲ್ಲಿ ₹1,575 ಅನ್ನು ಸರ್ಕಾರಿ ಖಜಾನೆಗೆ ಭರಿಸಿಲ್ಲ ಎಂಬುದು ಮತ್ತು ನೀಡಲಾದ ರಶೀದಿ ನಕಲಿ ಎಂಬುದು ತಿಳಿದುಬಂದಿತ್ತು. ಇದರ ಬೆನ್ನಲ್ಲೇ ಮಹೇಂದ್ರ ಕುಮಾರ್ ವಿರುದ್ಧ ಪೊಲೀಸ್ ದೂರು ನೀಡಲಾಗಿತ್ತು. ಆಂತರಿಕ ತನಿಖೆಯಲ್ಲಿ ಮಹೇಂದ್ರ ಅವರು ತಪ್ಪೊಪ್ಪಿಕೊಂಡು, ಮುಂದೆ ಎಂದಿಗೂ ಹೀಗೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದರು.

‘ನ್ಯಾಯಾಲಯದಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ನವರು ಅಪರಾಧ ಸಾಬೀತು ಮಾಡಲು ಅಗತ್ಯವಿರುವ ಸಾಕ್ಷಾಧಾರಗಳನ್ನು ಒದಗಿಸಿದ್ದರು. ಸರ್ಕಾರಿ ಅಧಿಕಾರಿಯು ಅತ್ಯುನ್ನತ ಪ್ರಾಮಾಣಿಕತೆ ಮತ್ತು ಸಮಗ್ರತೆಯಿಂದ ಕೆಲಸ ಮಾಡಬೇಕು ಎಂಬ ನಿರೀಕ್ಷೆ ಇದೆ. ಆದರೆ, ಇಂಥ ಅಪರಾಧಗಳು ಸರ್ಕಾರಿ ವ್ಯವಸ್ಥೆ ಮೇಲಿನ ನಂಬಿಕೆಯನ್ನೇ ಹುಸಿಗೊಳಿಸುತ್ತದೆ. ಜತೆಗೆ ಆಡಳಿತದ ಮೇಲಿನ ಭರವಸೆಯನ್ನು ಜನರೂ ಕಳೆದುಕೊಳ್ಳಲಾರಂಭಿಸುತ್ತಾರೆ’ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.