ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ ಸುದ್ದಿಗಳು: ಬುಧವಾರ, ಆಗಸ್ಟ್‌ 9, 2023

Published 9 ಆಗಸ್ಟ್ 2023, 13:51 IST
Last Updated 9 ಆಗಸ್ಟ್ 2023, 13:51 IST
ಅಕ್ಷರ ಗಾತ್ರ
Introduction

ಬ್ಯಾಂಕಾಕ್‌ನಲ್ಲಿ ನಿಧನರಾದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಪಾರ್ಥಿವ ಶರೀರದ ಅಂತ್ಯಸಂಸ್ಕಾರ, ಬಿಜೆಪಿ ರಾಜಕಾರಣದಿಂದ ಮಣಿಪುರದಲ್ಲಿ 'ಭಾರತ ಮಾತೆ'ಯ ಕೊಲೆ ಆಗಿದೆ ಎಂದು ರಾಹುಲ್ ಗಾಂಧಿ ಆರೋಪ, ಕ್ವಿಟ್‌ ಇಂಡಿಯಾ: ವಿಪಕ್ಷಗಳ ವಿರುದ್ಧ ನರೇಂದ್ರ ಮೋದಿ ವಾಗ್ದಾಳಿ. ಇವೇ ಮುಂತಾದ ದಿನದ ಟಾಪ್ 10 ಸುದ್ದಿಗಳನ್ನು ಓದಿ..

1

ಸ್ಪಂದನಾ ವಿಜಯ್ ಪಂಚಭೂತಗಳಲ್ಲಿ ಲೀನ

ಬ್ಯಾಂಕಾಕ್‌ನಲ್ಲಿ ನಿಧನರಾದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿತು. ಪತಿ ವಿಜಯ ರಾಘವೇಂದ್ರ ಮತ್ತು ಮಗ ಶೌರ್ಯ ಅಂತಿಮ ವಿಧಿ ವಿಧಾನ ನೆರವೇರಿಸಿದರು.

ಓದಲು..

ಸ್ಪಂದನಾ ವಿಜಯ್ ಪಂಚಭೂತಗಳಲ್ಲಿ ಲೀನ

2

ಬಿಜೆಪಿ ರಾಜಕಾರಣದಿಂದ ಮಣಿಪುರದಲ್ಲಿ 'ಭಾರತ ಮಾತೆ'ಯ ಕೊಲೆ: ರಾಹುಲ್ ಗಾಂಧಿ

ಲೋಕಸಭೆಯಲ್ಲಿ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ರಾಜಕೀಯದಿಂದ ಮಣಿಪುರದಲ್ಲಿ 'ಭಾರತ ಮಾತೆ'ಯ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಓದಲು..

ಬಿಜೆಪಿ ರಾಜಕಾರಣದಿಂದ ಮಣಿಪುರದಲ್ಲಿ 'ಭಾರತ ಮಾತೆ'ಯ ಕೊಲೆ: ರಾಹುಲ್ ಗಾಂಧಿ

3

ಕ್ವಿಟ್‌ ಇಂಡಿಯಾ: ವಿಪಕ್ಷಗಳ ವಿರುದ್ಧ ನರೇಂದ್ರ ಮೋದಿ ವಾಗ್ದಾಳಿ

ನವದೆಹಲಿ: ‘ಭ್ರಷ್ಟಾಚಾರ, ವಂಶಾಡಳಿತ ಹಾಗೂ ಓಲೈಸುವಿಕೆಯ ರಾಜಕಾರಣದ ವಿರುದ್ಧ ಭಾರತ ಒಂದೇ ಧ್ವನಿಯಲ್ಲಿ ಮಾತನಾಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮಹಾತ್ಮಗಾಂಧಿ ಅವರು ನಡೆಸಿದ್ದ ಕ್ವಿಟ್ ಇಂಡಿಯಾ ಚಳವಳಿಯನ್ನು ಅವರು ಸ್ಮರಿಸಿದ್ದಾರೆ.

ಓದಲು..

ಕ್ವಿಟ್‌ ಇಂಡಿಯಾ: ವಿಪಕ್ಷಗಳ ವಿರುದ್ಧ ನರೇಂದ್ರ ಮೋದಿ ವಾಗ್ದಾಳಿ

4

ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ಪ್ರಥಮ: ಈಶ್ವರ ಖಂಡ್ರೆ

Eshwar Khandre
Eshwar Khandre

ಈ ವರ್ಷದ ಆನೆ ಗಣತಿ ವರದಿ ಪ್ರಕಾರ, ರಾಜ್ಯದಲ್ಲಿ ಪ್ರಸ್ತುತ 6,395 ಆನೆಗಳಿವೆ. ಹುಲಿ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕವು, ಆನೆಗಳ ಸಂಖ್ಯೆಯಲ್ಲಿ ದೇಶದಲ್ಲಿ ಮೊದಲ ಸ್ಥಾನ ಪಡೆದಿದೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಓದಲು..

ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ಪ್ರಥಮ: ಈಶ್ವರ ಖಂಡ್ರೆ

5

ಮಂಡ್ಯ ಕೃಷಿ ಇಲಾಖೆಗೆ ಸಿಐಡಿ ಅಧಿಕಾರಿಗಳ ತಂಡ ಭೇಟಿ

Venugopala K.
Venugopala K.

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ವಿರುದ್ಧ ಕೃಷಿ ಸಹಾಯಕ ನಿರ್ದೇಶಕರು ರಾಜ್ಯಪಾಲರಿಗೆ ನೀಡಿದ್ದಾರೆ ಎನ್ನಲಾದ ದೂರಿನ ಸಂಬಂಧ ತನಿಖೆ ನಡೆಸಲು ಸಿಐಡಿ ಅಧಿಕಾರಿಗಳ ತಂಡ ಬುಧವಾರ ಮಂಡ್ಯ ನಗರದ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಓದಲು..

ಮಂಡ್ಯ ಕೃಷಿ ಇಲಾಖೆಗೆ ಸಿಐಡಿ ಅಧಿಕಾರಿಗಳ ತಂಡ ಭೇಟಿ

6

ಕಾರಿನಲ್ಲೇ ಸಾಕುನಾಯಿ ಬಿಟ್ಟು ವಿಮಾನದಲ್ಲಿ ಹಾರಿದ ಪ್ರಯಾಣಿಕ

ದೇವನಹಳ್ಳಿಯ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿ ಅದರಲ್ಲಿಯೇ ಸಾಕುನಾಯಿ ಬಿಟ್ಟು ಲಾಕ್ ಮಾಡಿ ಕೊಯಮುತ್ತೂರಿಗೆ ಹೋಗಿದ್ದಾರೆ.

ಓದಲು..

ಕಾರಿನಲ್ಲೇ ಸಾಕುನಾಯಿ ಬಿಟ್ಟು ವಿಮಾನದಲ್ಲಿ ಹಾರಿದ ಪ್ರಯಾಣಿಕ

7

ಯುವತಿಗೆ ಕೈಕೊಟ್ಟು ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಕೇರಳ ರಾಜ್ಯದ ಪನಮರಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ವರ್ಷದ ಹಿಂದೆ 19 ವರ್ಷದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ, ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ‌ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿತನನ್ನು ಇಲ್ಲಿನ ಕೆಂಪೇಗೌಡ ವಿಮಾನ ನಿಲ್ದಾಣದ ಅಧಿಕಾರಿಗಳು ವಶಕ್ಕೆ ಪಡೆದು ಮಂಗಳವಾರ ರಾತ್ರಿ ಕೇರಳ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.

ಓದಲು..

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

8

ಕೇರಳಕ್ಕೆ ‘ಕೇರಳಂ’ಎಂದು ಮರುನಾಮಕರಣ: ವಿಧಾನಸಭೆಯಲ್ಲಿ ನಿಲುವಳಿ

Pinarayi Vijayan talks about
Pinarayi Vijayan talks about

ಕೇರಳ ರಾಜ್ಯವನ್ನು ‘ಕೇರಳಂ’ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲು ಕೇಂದ್ರ ಸರ್ಕಾರವನ್ನು ಕೋರಿ ಮಂಡಿಸಲಾದ ನಿಲುವಳಿಗೆ ಕೇರಳ ವಿಧಾನಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ. ಸಂವಿಧಾನದ ಎಂಟನೇ ಪರಿಚ್ಛೇದ ಸೇರಿ ಎಲ್ಲಾ ಭಾಷೆಗಳಲ್ಲಿ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಬೇಕು ಎನ್ನುವ ನಿಲುವಳಿಯನ್ನು ಮುಖ್ಯಮಂತ್ರಿ ಪಿನಾರಾಯಿ ವಿಜಯನ್ ಅವರು ಮಂಡಿಸಿದ್ದರು.

ಓದಲು..

ಕೇರಳಕ್ಕೆ ‘ಕೇರಳಂ’ಎಂದು ಮರುನಾಮಕರಣ: ವಿಧಾನಸಭೆಯಲ್ಲಿ ನಿಲುವಳಿ

9

ಸಾಯುವ ಮುನ್ನ ಬಾಲ್ಯದ ಗೆಳೆಯನ ವರಿಸಿದ 10 ವರ್ಷದ ಬಾಲಕಿ!

ರಕ್ತದ ಕ್ಯಾನ್ಸರ್‌(ಲುಕೇಮಿಯಾ) ನಿಂದ ಬಳಲುತ್ತಿದ್ದ 10 ವರ್ಷದ ಹುಡುಗಿಯೊಬ್ಬಳು ಸಾಯುವುದಕ್ಕೂ ಮುನ್ನ ತನ್ನ ಬಾಲ್ಯದ ಗೆಳೆಯನನ್ನು ಮದುವೆಯಾಗಿದ್ದಾಳೆ. ಅಮೆರಿಕದ ಎಮ್ಮಾ ಎಡ್ವರ್ಡ್ಸ್‌ ಕಳೆದ ವರ್ಷ ಏಪ್ರಿಲ್‌ನಲ್ಲಿ ‘ಅಕ್ಯುಟ್‌ ಲಿಂಫೋಬ್ಲಾಸ್ಟಿಕ್ ಲುಕೇಮಿಯಾ’ಕ್ಕೆ ತುತ್ತಾಗಿದ್ದಳು. ಇದೊಂದು ಗುಣಪಡಿಸಲಾಗದ ಕಾಯಿಲೆಯಾಗಿದೆ. ಮಗಳ ಸ್ಥಿತಿ ಕಂಡು ಚಿಂತಾಜನಕರಾದ ಪೋಷಕರು ಆಕೆಯ ಕೊನೆ ಆಸೆ ಪೂರೈಸಿದ್ದಾರೆ ಎಂದು ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದೆ.

ಓದಲು..

ಸಾಯುವ ಮುನ್ನ ಬಾಲ್ಯದ ಗೆಳೆಯನ ವರಿಸಿದ 10 ವರ್ಷದ ಬಾಲಕಿ!

10

ಕೈಮುಗಿದು ಪ್ರಾರ್ಥಿಸುತ್ತೇನೆ ಹಿಂಸೆಯನ್ನು ನಿಲ್ಲಿಸಿ: ಮಣಿಪುರದ ಮೈತೇಯಿ ಮತ್ತು ಕುಕಿ ಸಮುದಾಯಗಳಿಗೆ ಅಮಿತ್ ಶಾ ಮನವಿ

Mandvi: Union Home Minister Amit Shah addressing a press conference after conducting surveys and inspections of the areas affected by Cyclone Biparjoy, in  Mandvi, on Saturday, June 17, 2023. (Photo: IANS/Twitter)
Mandvi: Union Home Minister Amit Shah addressing a press conference after conducting surveys and inspections of the areas affected by Cyclone Biparjoy, in Mandvi, on Saturday, June 17, 2023. (Photo: IANS/Twitter)

ಕೈಮುಗಿದು ಪ್ರಾರ್ಥಿಸುತ್ತೇನೆ ಹಿಂಸೆಯನ್ನು ನಿಲ್ಲಿಸಿ ಎಂದು ಮಣಿಪುರದ ಮೈತೇಯಿ ಮತ್ತು ಕುಕಿ ಸಮುದಾಯಗಳಿಗೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ. ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ವೇಳೆ ಮಣಿಪುರ ಹಿಂಸಾಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಹಿಂಸಾಚಾರದಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಕೈಮುಗಿದು ಪ್ರಾರ್ಥಿಸುತ್ತೇನೆ. ಮಣಿಪುರದಲ್ಲಿ ಶಾಮತಿ ಮರುಸ್ಥಾಪಿಸುವ ವಾಗ್ಧಾನವನ್ನು ನಾವು ಮಾಡುತ್ತೇವೆ. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಶಾ ಹೇಳಿದರು.