ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನಾನು ನೀಡಿದ್ದಕ್ಕಿಂತಲೂ ಹೆಚ್ಚಿನದನ್ನು ಪಡೆದುಕೊಂಡಿದ್ದೇನೆ': ಪ್ರಣವ್ ಮುಖರ್ಜಿ

ದೇಶದ ಜನರಿಗೆ ಕೃತಜ್ಞತೆ ಸಲ್ಲಿಸಿದ ಮಾಜಿ ರಾಷ್ಟ್ರಪತಿ
Last Updated 26 ಜನವರಿ 2019, 15:06 IST
ಅಕ್ಷರ ಗಾತ್ರ

ನವದೆಹಲಿ: ಭಾರತ ರತ್ನ ಪುರಸ್ಕಾರ ಕುರಿತು ಮಾತುನಾಡಿರುವ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು, ‘ನಾನು ಜನರಿಗೆ ನೀಡಿರುವುದಕ್ಕಿಂತಲೂ ಹೆಚ್ಚಿನದನ್ನು ಜನರಿಂದ ಪಡೆದುಕೊಂಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಪ್ರಣವ್‌, ‘ದೇಶದ ಜನರಿಗೆ ತುಂಬುಹೃದಯದ ಕೃತಜ್ಞತೆಗಳನ್ನು ಅರ್ಪಿಸಲು ಬಯಸುತ್ತೇನೆ. ಇದನ್ನು ನಾನು ಯಾವಾಗಲು ಹೇಳುತ್ತೇನೆ. ಮತ್ತೆ ಮತ್ತೆ ಹೇಳಲು ಬಯಸುತ್ತೇನೆ. ನನ್ನ ಸಾರ್ವಜನಿಕ ಜೀವನದಲ್ಲಿ ಈ ಜನರಿಗೆ ಹಾಗೂದೇಶಕ್ಕೆ ನೀಡಿರುವುದಕ್ಕಿಂತಲೂ ಹೆಚ್ಚಿನದನ್ನು ಪಡೆದುಕೊಂಡಿದ್ದೇನೆ’ ಎಂದು ಭಾವುಕವಾಗಿ ನುಡಿದರು.

ದೇಶದ ಜನರಿಗೆ 70ನೇ ಗಣರಾಜ್ಯೋತ್ಸವದ ಶುಭಾಶಯ ಕೋರಿದ ಅವರು, ‘ಇದೇ ವೇಳೆ ಈ(ಭಾರತರತ್ನ) ಗೌರವವನ್ನು ವಿನಮ್ರತೆಯಿಂದ ಒಪ್ಪಿಕೊಳ್ಳುತ್ತಿದ್ದೇನೆ’ ಎಂದರು.

‘70 ವರ್ಷಗಳ ಹಿಂದೆ ನಾವು ಹೊಸ ವರ್ಷವನ್ನು ಆರಂಭಿಸಿದ್ದವು. ಇದೀಗ ನಾವು ಆರಂಭಿಸಿದ್ದಲ್ಲಿಂದ ತುಂಬಾ ದೂರ ಸಾಗಿ ಬಂದಿದ್ದೇವೆ. ಭಾರತ ಯಾವಾಗಲು ವೈವಿಧ್ಯತೆಯನ್ನು ಆಚರಿಸುತ್ತಾ, ಬಹುತ್ವವನ್ನು ಅನುಭವಿಸುತ್ತಾ ಬಂದಿದೆ. ದೇಶದ ಬಹುದೊಡ್ಡ ಸಂಖ್ಯೆಯ ಜನರು ಹೊಂದಿರುವಏಕತೆಯ ಭಾವವು ಸ್ಫೂರ್ತಿದಾಯಕವಾದುದು. 33 ಲಕ್ಷ ಚದರ ಕಿ.ಮೀ ನಷ್ಟಿರುವ ಭೂ ಪ್ರದೇಶದಲ್ಲಿ, ಸುಮಾರು 122 ಭಾಷೆಗಳನ್ನು ಮಾತನಾಡುವ 130 ಕೋಟಿ ಜನರು ಒಂದೇ ಸಂವಿಧಾನದ ಅಡಿಯಲ್ಲಿ ನೆಲೆಸಿದ್ದೇವೆ. ಇಂಥ ಏಕತೆ ಸಾಧ್ಯವಾದದ್ದು ಸಂವಿಧಾನದಿಂದ.ವಿಭಿನ್ನ ಸಮುದಾಯದ ಜನರನ್ನು ಅದು ಒಂದುಗೂಡಿಸಿದೆ’ ಎಂದು ಅಭಿಪ್ರಾಯಪಟ್ಟರು.

ಮಾರು 5 ದಶಕಗಳಿಗೂ ಹೆಚ್ಚು ಕಾಲದ ರಾಜಕೀಯ ಅನುಭವ ಹೊಂದಿರುವ ಪ್ರಣವ್‌, ಕಾಂಗ್ರೆಸ್‌ನಲ್ಲಿ ಹಲವು ಪ್ರಮುಖ ಸ್ಥಾನಗಳನ್ನು ನಿರ್ವಹಿಸಿದ್ದಾರೆ. ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಪಿ.ವಿ.ನರಸಿಂಹ ರಾವ್‌ ಹಾಗೂ ಮನಮೋಹನ್‌ ಸಿಂಗ್‌ ಸರ್ಕಾರಗಳಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

83 ವರ್ಷ ವಯಸ್ಸಿನ ಪ್ರಣವ್‌ ಮುಖರ್ಜಿ 2012–17ರಲ್ಲಿ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ್ದರು.

ಪ್ರಣವ್‌ ಮಾತ್ರವಲ್ಲದೆಶಿಕ್ಷಣ ತಜ್ಞ ನಾನಾಜಿ ದೇಶಮುಖ್, ಸಂಗೀತ ನಿರ್ದೇಶಕ ಭೂಪೆನ್ ಹಜಾರಿಕಾ (ಮರಣೋತ್ತರ) ಅವರಿಗೆ ಕೇಂದ್ರ ಸರ್ಕಾರ ‘ಭಾರತ ರತ್ನ’ ಪುರಸ್ಕಾರಕ್ಕೆ ಘೋಷಣೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT