ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸಂಸ್ಕೃತಿ ಉತ್ತೇಜನಕ್ಕೆ ಪ್ರಸಾರ ಭಾರತಿ–ಐಸಿಸಿಆರ್‌ ಒಪ್ಪಂದ

Last Updated 20 ಡಿಸೆಂಬರ್ 2021, 15:49 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಸಾರ ಬಾರತಿ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್‌) ಒಪ್ಪಂದ ಮಾಡಿಕೊಂಡಿದ್ದು, ಸೋಮವಾರ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿವೆ.

ಒಪ್ಪಂದದ ಪ್ರಕಾರ ಐಸಿಸಿಆರ್‌ ಜೊತೆ ಸಹಯೋಗ ಹೊಂದಿರುವ ಪ್ರಸಿದ್ಧ ಕಲಾವಿದರ ಪ್ರದರ್ಶನಗಳನ್ನು ದೂರದರ್ಶನದ ವಿವಿಧ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.

‘ಕಲಾವಿದರ ಸಂಗೀತ ಮತ್ತು ನೃತ್ಯ ಪ್ರದರ್ಶನಗಳನ್ನು ವಾರಕ್ಕೆ ಒಂದು ಕಾರ್ಯಕ್ರಮದಂತೆ ಡಿಡಿ ನ್ಯಾಷನಲ್‌, ಡಿಡಿ ಇಂಡಿಯಾ, ದೂರದರ್ಶನದ ಪ್ರಾದೇಶಿಕ ವಾಹಿನಿಗಳು ಮತ್ತು ಪ್ರಸಾರ ಭಾರತಿಯ ಡಿಜಿಟಲ್‌ ವೇದಿಕೆಗಳಲ್ಲಿ ಪ್ರಸಾರ ಮಾಡಲಾಗುವುದು’.

‘ಪ್ರದರ್ಶನ ಕಲಾವಿದರಿಗೆ ದೂರದರ್ಶನ ಮತ್ತು ಡಿಜಿಟಲ್‌ನಲ್ಲಿ ವೇದಿಕೆ ಕಲ್ಪಿಸುವುದು ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೀಕ್ಷಕರ ಮುಂದೆ ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ತೆರೆದಿಡುವುದು ಈ ಒಪ್ಪಂದದ ಉದ್ದೇಶವಾಗಿದೆ’ ಎಂದು ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT