ಶ್ರೀನಗರ: ಇತ್ತೀಚೆಗಷ್ಟೇ ಉಗ್ರರ ತಂಡವನ್ನು ಸೇರಿಕೊಂಡಿದ್ದ ಮಧ್ಯ ಕಾಶ್ಮೀರದ ಬಡಗಾಮ್ ಮೂಲದ ವ್ಯಕ್ತಿಯ ಕುಟುಂಬವು, ಆತನ ಗರ್ಭಿಣಿ ಪತ್ನಿ ಮತ್ತು ನಾಲ್ಕು ವರ್ಷದ ಮಗನ ಸಲುವಾಗಿ ಮನೆಗೆ ಮರಳುವಂತೆ ಬುಧವಾರ ಆತನಿಗೆ ಮನವಿ ಮಾಡಿದೆ.

ಬಡಗಾಮ್‌ನಲ್ಲಿರುವ ಚಾದೂರಾದ ಹಂಜಿಗುಂಡ್‌ನ ತಾರಿಕ್ ಅಹ್ಮದ್ ಭಟ್ ಇತ್ತೀಚೆಗಷ್ಟೇ ಉಗ್ರರ ಗುಂಪನ್ನು ಸೇರಿಕೊಂಡಿದ್ದ. ಹೀಗಾಗಿ ಆತನ ಕುಟುಂಬವು ಶೀಘ್ರವೇ ಹಿಂತಿರುಗಿ ಬರುವಂತೆ ಆತನಿಗೆ ಮನವಿ ಮಾಡಿದೆ. ವಿಡಿಯೊದಲ್ಲಿ, ವೃತ್ತಿಯಲ್ಲಿ ಆಟೋಚಾಲಕನಾಗಿದ್ದ ತಮ್ಮ ಮಗನನ್ನು ಮನೆಗೆ ಕಳುಹಿಸುವಂತೆ ಉಗ್ರರನ್ನು ಬೇಡಿಕೊಂಡಿದೆ.

ತಮ್ಮ ಮಗ ಕಾಣೆಯಾಗಿರುವ ಬಗ್ಗೆ ಸೆಪ್ಟೆಂಬರ್ 20 ರಂದು ಚಡೂರಾ ಎಂಬ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ.

'ನಾವು ಆಘಾತಕ್ಕೊಳಗಾಗಿದ್ದೇವೆ ಏಕೆಂದರೆ, ತಾರಿಕ್ ಉಗ್ರಗಾಮಿತ್ವದತ್ತ ಒಲವು ತೋರುತ್ತಾನೆ ಎಂದು ನಾವೆಂದಿಗೂ ಭಾವಿಸಿರಲಿಲ್ಲ. ಆದರೆ ಆತನ 4 ವರ್ಷದ ಮಗ, ಗರ್ಭಿಣಿ ಹೆಂಡತಿ ಮತ್ತು ವಯಸ್ಸಾದ ಪೋಷಕರಿಗೆ ಮತ್ತೆ ಮನೆಗೆ ಮರಳಲು ನಾವು ವಿನಂತಿಸುತ್ತೇವೆ' ಎಂದು ಕುಟುಂಬ ಸದಸ್ಯರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕುಟುಂಬ ಮೂಲಗಳ ಪ್ರಕಾರ, 'ತಾರಿಕ್ ಶುಕ್ರವಾರ (ಸೆ.18) ನಾಪತ್ತೆಯಾಗಿದ್ದಾನೆ ಮತ್ತು ಆತನನ್ನು ಎಲ್ಲೆಡೆ ಹುಡುಕಿದರೂ ಪತ್ತೆಯಾಗಲಿಲ್ಲ. ಆದರೆ ಭಾನುವಾರ ಸಂಜೆ, ನಮ್ಮ ಮಗ ಉಗ್ರರ ತಂಡವನ್ನು ಸೇರಿಕೊಂಡಿರುವುದಾಗಿ ಘೋಷಿಸಿದ ಆಡಿಯೊವನ್ನು ಕೇಳಿದೆವು' ಎನ್ನುತ್ತಾರೆ.

ಆತ ಎಲ್ಲಿದ್ದರೂ ಮನೆಗೆ ಹಿಂತಿರುಗಬೇಕು ಎಂದು ಆತನ ಹೆಂಡತಿ ಮನವಿ ಮಾಡಿದ್ದಾರೆ. 'ನಿಮ್ಮ ಮಗನನ್ನು ಬಿಡಬೇಡಿ. ನನ್ನ ಗರ್ಭದಲ್ಲಿಯೂ ಒಂದು ಮಗು ಇದೆ, ಅದನ್ನು ನೋಡಿಕೊಳ್ಳುವವರು ಯಾರು. ನೀವು ಹಿಂತಿರುಗದಿದ್ದರೆ, ನಾವು ಸಾಯುತ್ತೇವೆ' ಎಂದು ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.