ಬುಲದಾಣಾ: 32 ವರ್ಷದ ಗರ್ಭಿಣಿಯ ಗರ್ಭದಲ್ಲಿರುವ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾಗಿರುವ ಅಪರೂಪದ ಘಟನೆ ಮಹಾರಾಷ್ಟ್ರದ ಬುಲದಾಣಾ ಜಿಲ್ಲೆಯಲ್ಲಿ ನಡೆದಿದೆ.

35 ವಾರಗಳ ಗರ್ಭಿಣಿಯಾಗಿದ್ದ ಮಹಿಳೆ ಜಿಲ್ಲಾಸ್ಪತ್ರೆಗೆ ತಪಾಸಣೆಗೆಂದು ಆಸ್ಪತ್ರೆಗೆ ಹೋಗಿದ್ದಾಗ ವೈದ್ಯರು ಸೊನೊಗ್ರಫಿ ಮಾಡಿದ್ದ ವೇಳೆ ಈ ಸಂಗತಿ ಬಹಿರಂಗವಾಗಿದೆ.

‘ಗರ್ಭದಲ್ಲಿರುವ ಮಗುವಿನಲ್ಲಿ ಭ್ರೂಣ ಇರುವುದು ಅತೀ ಅಪರೂಪದ ಘಟನೆಯಾಗಿದೆ. ಐದು ಲಕ್ಷದಲ್ಲಿ ಒಬ್ಬರಿಗೆ ಈ ರೀತಿ ಕಂಡುಬರುತ್ತದೆ. ಜಗತ್ತಿನಲ್ಲಿ ಈವರೆಗೆ 200 ಈ ರೀತಿಯ ಪ್ರಕರಣ ಪತ್ತೆಯಾಗಿದೆ. ಅದೂ ಹೆರಿಗೆಯ ಬಳಿಕ ಗೊತ್ತಾಗಿದೆ. ಭಾರತದಲ್ಲೇ 10–25 ಪ್ರಕರಣಗಳು ಪತ್ತೆಯಾಗಿದೆ’ ಎಂದು ಜಿಲ್ಲಾಸ್ಪತ್ರೆಯ ಪ್ರಸೂತಿತಜ್ಞ ಡಾ. ಪ್ರಸಾದ್ ಅಗರ್ವಾಲ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಈ ಮಹಿಳೆಯ ಪ್ರಕರಣದಲ್ಲಿ ಮಗು ಗರ್ಭದಲ್ಲಿರುವಾಗಲೇ ಭ್ರೂಣ ಇರುವುದು ಗೊತ್ತಾಗಿದೆ. ಈ ವಿಚಾರ ತಿಳಿದಾಗ ರೆಡಿಯೊಲಾಜಿಸ್ಟ್ ಬಳಿಯೂ ಸಲಹೆ ಕೇಳಲಾಗಿದೆ. ಸುರಕ್ಷಿತ ಹೆರಿಗೆ ಮತ್ತು ಮುಂದಿನ ಪ್ರಕ್ರಿಯೆಗಳು ಸುಸೂತ್ರವಾಗಿ ನಡೆಯಬೇಕೆಂದು ಮಹಿಳೆಗೆ ಛತ್ರಪತಿ ಸಂಭಾಜಿನಗರದಲ್ಲಿರುವ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ’ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.