ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಲೋಪ: ಗುರುತಿನ ಚೀಟಿ ಇಲ್ಲದೆ ನೀಲಂ ಸಂಸತ್ ಆವರಣ ಪ್ರವೇಶಿಸಿದ್ದು ಹೇಗೆ?

Published 13 ಡಿಸೆಂಬರ್ 2023, 13:26 IST
Last Updated 13 ಡಿಸೆಂಬರ್ 2023, 13:27 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ ಭವನದ ಎದುರು ಬಣ್ಣದ ಅನಿಲ ಹೊಗೆ ಸಿಂಪಡಿಸಿ ಘೋಷಣೆ ಕೂಗಿದ ನೀಲಂ ಹಾಗೂ ಅಮೋಲ್‌ ಸದ್ಯ ಪೊಲೀಸರ ವಶದಲ್ಲಿದ್ದು, ಆವರಣ ಪ್ರವೇಶ ಸಂದರ್ಭದಲ್ಲಿ ಯಾವುದೇ ಮೊಬೈಲ್ ಫೋನ್ ಹಾಗೂ ಗುರುತಿನ ಚೀಟಿ ತೆಗೆದುಕೊಂಡು ಹೋಗಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಹರಿಯಾಣ ಜಿಲ್ಲೆಯ ಹಿಸ್ಸಾರ್‌ನವರಾದ ನೀಲಂ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದಾರೆ. ಸಂಸತ್ ಭವನದ ಆವರಣಕ್ಕೆ ತಾವಾಗಿಯೇ ಪ್ರವೇಶಿಸಿದ್ದು, ಯಾವುದೇ ಸಂಘಟನೆಗಳೊಂದಿಗೂ ನಾವು ಗುರುತಿಸಿಕೊಂಡಿಲ್ಲ ಎಂದು ಪೊಲೀಸರು ವಶಕ್ಕೆ ಪಡೆಯುವ ಮೊದಲು ನೀಲಂ ಹೇಳಿದ್ದಾರೆ.

ಲೋಕಸಭೆಯಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಇಬ್ಬರು ಸದನದೊಳಗೆ ನುಗ್ಗಿ, ಹಳದಿ ಹೊಗೆ ಸಿಂಪಡಿಸಿ, ‘ಸರ್ವಾಧಿಕಾರ ನಡೆಯುವುದಿಲ್ಲ’ ಎಂದು ಘೋಷಣೆ ಕೂಗಿದ್ದರು. ಇವರಂತೆಯೇ ಸಂಸತ್ ಭವನದ ಹೊರಗಿದ್ದ ಇಬ್ಬರೂ ನಿಷೇಧಾಜ್ಞೆ ಉಲ್ಲಂಘಿಸಿ ಇದೇ ರೀತಿಯ ಘೋಷಣೆ ಕೂಗಿದ ಆರೋಪದ ಮೇಲೆ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ.

ಘಟನೆ ಕುರಿತು ವಿಶೇಷ ತನಿಖಾ ತಂಡ ರಚಿಸಿರುವ ದೆಹಲಿ ಪೊಲೀಸರು, ಹಲವು ಆಯಾಮಗಳಿಂದ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT