ಶಬರಿಮಲೆ: ಜ.15ರಂದು ನಡೆಯುವ ‘ಮಕರವಿಳಕ್ಕು’ ಉತ್ಸವಕ್ಕಾಗಿ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಸಿದ್ಧತೆಗಳು ಅಂತಿಮ ಹಂತದಲ್ಲಿವೆ’ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

‘ಮಕರವಿಳಕ್ಕು’ ಉತ್ಸವ ದಿನದಂದು ಶಬರಿಮಲೆಗೆ ಭೇಟಿ ನೀಡುವ ಪ್ರತಿ ಯಾತ್ರಾರ್ಥಿಗಳಿಗೂ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು’ ಎಂದು ಶಬರಿಮಲೆ ಆಡಳಿತಾತ್ಮಕ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಅರುಣ್.ಎಸ್.ನಾಯರ್ ತಿಳಿಸಿದರು.

‘ಸದ್ಯ, ದೇವಾಲಯದಲ್ಲಿ ಹೆಚ್ಚಿನ ದಟ್ಟಣೆ ಹೊಂದಿದ್ದು, ಪ್ರತಿ ದಿನವೂ 90 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಮಕರವಿಳಕ್ಕು ಅಂಗವಾಗಿ ‘ಪ್ರಸಾದ ಶುದ್ಧ ಕ್ರಿಯೆ’ ಮತ್ತು ‘ಬಿಂಬ ಶುದ್ಧ ಕ್ರಿಯೆ’ ಮೊದಲಾದ ಧಾರ್ಮಿಕ ವಿಧಿಗಳು ಜನವರಿ 13 ಮತ್ತು 14ರಂದು ನಡೆಯಲಿವೆ. ಆ ದಿನದಂದು ‘ತಿರುವಾಭರಣ’ ಸ್ವೀಕಾರ, ದೀಪಾರಾಧನೆಗೆ ಸಾವಿರಾರು ಮಂದಿ ಭಕ್ತರು ಸಾಕ್ಷಿಯಾಗಲಿದ್ದಾರೆ ಎಂದಿದೆ.

ಮಕರವಿಳಕ್ಕು ದರ್ಶನದ ಬಳಿಕವೂ ಜನವರಿ 20ರ ವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದೂ ದೇವಾಲಯದ ಅಧಿಕಾರಿಗಳ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.