ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ ವಿದಾನಸಭೆ ವಿಸರ್ಜನೆಗೆ ಚುನಾವಣಾ ಆಯೋಗ ಅಸಮಾಧಾನ

Last Updated 7 ಸೆಪ್ಟೆಂಬರ್ 2018, 11:00 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರು ನಿರೀಕ್ಷೆಯಂತೆಯೇ, ತೆಲಂಗಾಣ ವಿಧಾನಸಭೆಯನ್ನು ಅವಧಿಗೆ ಮುನ್ನವೇ ವಿಸರ್ಜಿಸಿರುವುದಕ್ಕೆ ಚುನಾವಣಾ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ.

ಇನ್ನು 8 ತಿಂಗಳ ಕಾಲಾವಧಿ ಇರುವಂತೆಯೇ ಕೆ. ಚಂದ್ರಶೇಖರ ರಾವ್‌ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ.

’ಕೆ.ಚಂದ್ರಶೇಖರ್ ಅವರ ನಡೆ ವಿವೇಚನಾರಹಿತವಾದುದು, ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಚುನಾವಣೆ ನಡೆಸುವುದನ್ನು ವಿಳಂಬ ಮಾಡದೇ ಸಕಾಲಕ್ಕೆ ನಡೆಸಬೇಕಾಗಿದೆ ಎಂದುಮುಖ್ಯ ಚುನಾವಣಾ ಆಯುಕ್ತ ಒಂ ಪ್ರಕಾಶ್‌ ರಾವತ್ ಶುಕ್ರವಾರ ಸಂಜೆ ಎನ್‌ಡಿಟಿವಿಗೆ ಪ್ರತಿಕ್ರಿಯಿಸಿದ್ದಾರೆ.

2019 ಜೂನ್ ಅಂತ್ಯಕ್ಕೆ ತೆಲಂಗಾಣ ವಿಧಾನಸಭೆ ಕೊನೆಗೊಳ್ಳಲಿದೆ.ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ ಮತ್ತು ಮಿಜೋರಾಂ ಜತೆಗೆ ರಾಜ್ಯಕ್ಕೂ ಚುನಾವಣೆ ನಡೆಯಲಿ ಎಂಬ ಕಾರಣಕ್ಕೆ ವಿಧಾನಸಭೆಯನ್ನು ವಿಸರ್ಜಿಸಲಾಗಿದೆ. ವಿಧಾನಸಭೆಯ 119 ಕ್ಷೇತ್ರಗಳ ಪೈಕಿ 105 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ಮೂಲಕ ಕೆ. ಚಂದ್ರಶೇಖರ ರಾವ್‌ ಚುನಾವಣಾ ಕಹಳೆ ಮೊಳಗಿಸಿದ್ದಾರೆ.

ಚುನಾವಣೆಗೆ ಸಿದ್ಧರಿದ್ದೇವೆ;ಬಿಜೆಪಿ

ತೆಲಂಗಾಣದಲ್ಲಿ ಅವಧಿಗಿಂತ ಮುಂಚಿತವಾಗಿ ನಡೆಯುವ ಚುನಾವಣೆಗೆ ಸಿದ್ಧರಿದ್ದೇವೆ. ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎನ್ನುವ ಭರವಸೆಯೂ ನಮಗಿದೆ. ತೆಲಂಗಾಣ ರಾಜಕೀಯದಲ್ಲಿ ಬಿಜೆಪಿ ಮಹತ್ವದ ಸ್ಥಾನ ಪಡೆಯಲಿದೆ ಎಂದು ಬಿಜೆಪಿ ನಾಯಕ ಎನ್‌. ರಾಮಚಂದ್ರ ರಾವ್‌ ತಿಳಿಸಿದರು.

‘ಟಿಡಿಪಿಗೆ ಸರಿಯಾದ ನಾಯಕತ್ವವಿಲ್ಲ. ಇತರೆ ಪಕ್ಷಗಳ ಒಂದೆರಡು ಶಾಸಕರನ್ನು ಹೊರತು ಪಡಿಸಿ ಎಲ್ಲಾ ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ. ಒಂದು ವೇಳೆ ಕಾಂಗ್ರೆಸ್‌–ಟಿಡಿಪಿ ಮೈತ್ರಿ ಮಾಡಿಕೊಂಡರೆ ಅದು ಹಾಲಿಗೆ ಮೊಸರು ಬೆರೆಸಿದಂತಾಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT