ನವದೆಹಲಿ: ಚೆಸ್ ಕ್ರೀಡೆಯಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಸಾಧಿಸಿದ ಅಭೂತಪೂರ್ವ ಪ್ರಾಬಲ್ಯವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶ್ಲಾಘಿಸಿದರು.

ಸ್ವಾತಂತ್ರ್ಯೋತ್ಸವದ ಮುನ್ನಾ ದಿನವಾದ ಗುರುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ರೀಡಾ ಕ್ಷೇತ್ರದಲ್ಲಿ ಭಾರತ ಪರಿವರ್ತನೆಯ ಹಾದಿಯಲ್ಲಿ ಸಾಗಿದೆ ಎಂದರು. ‘ನಮ್ಮ ಯುವ ಕ್ರೀಡಾಪಟುಗಳಲ್ಲಿ ಆತ್ಮವಿಶ್ವಾಸ ತುಳುಕಿದ್ದು, ಕ್ರೀಡೆಗಳಲ್ಲಿ ಮೈಲಿಗಲ್ಲುಗಳನ್ನು ಸಾಧಿಸುತ್ತಿದ್ದಾರೆ. ಉದಾಹರಣೆಗೆ ಚೆಸ್ನಲ್ಲಿ ಭಾರತದ ಯುವ ಆಟಗಾರರು ಹಿಂದೆಂದೂ ಕಾಣದಷ್ಟು ಪ್ರಾಬಲ್ಯ ತೋರಿದ್ದಾರೆ’ ಎಂದರು.

ವಿಶ್ವ ಚಾಂಪಿಯನ್ ಗುಕೇಶ್, ಮಹಿಳಾ ವಿಶ್ವಕಪ್ ವಿಜೇತೆ ದಿವ್ಯಾ ದೇಶಮುಖ್, ಕೋನೇರು ಹಂಪಿ, ಯುವ ಆಟಗಾರ್ತಿಯರಾದ ವೈಶಾಲಿ, ಪ್ರಜ್ಞಾನಂದ, ಅರ್ಜುನ್ ಇರಿಗೇಶಿ, ವಿದಿತ್ ಗುಜರಾತಿ ಮೊದಲಾದ ಚೆಸ್ಪಟುಗಳ ಹೆಸರನ್ನು ಉಲ್ಲೇಖಿಸಿದರು.

ಹೊಸ ಕ್ರೀಡಾ ಆಡಳಿತ ಕಾಯ್ದೆಯನ್ನೂ ಅವರು ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.