ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.7ರಂದು ಡಿಜಿಟಲ್‌ ಇಂಡಿಯಾ ಪ್ರಶಸ್ತಿ ವಿತರಿಸಲಿರುವ ರಾಷ್ಟ್ರಪತಿ

Last Updated 6 ಜನವರಿ 2023, 11:06 IST
ಅಕ್ಷರ ಗಾತ್ರ

ನವದೆಹಲಿ: ಡಿಜಿಟಲ್‌ ಇಂಡಿಯಾ ಪ್ರಶಸ್ತಿ ವಿಜೇತರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ಪ್ರಶಸ್ತಿ ವಿತರಿಸಲಿದ್ದಾರೆ.


ದೇಶದಲ್ಲಿ ಡಿಜಿಟಲ್‌ ವೇದಿಕೆ ಉತ್ತೇಜಿಸುವ ನಿಟ್ಟಿನಲ್ಲಿ ಹಾಗೂ ಡಿಜಿಟಲ್‌ ಜ್ಞಾನ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಪ್ರಶಸ್ತಿ ಆರಂಭಿಸಿತ್ತು. ಈ ಪ್ರಶಸ್ತಿ ಕೇವಲ ಸರ್ಕಾರಿ ಸಂಸ್ಥೆಗಳನ್ನು ಮಾತ್ರ ಗುರುತಿಸುವುದಿಲ್ಲ. ಸ್ಟಾರ್ಟಪ್‌ ಮತ್ತು ತಳಮಟ್ಟದ ಡಿಜಿಟಲ್‌ ಕಾರ್ಯಕ್ರಮಗಳನ್ನು ಕೂಡ ಗುರುತಿಸಿ ಉತ್ತೇಜಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.


ಐಟಿ ಸಚಿವ ಅಶ್ವಿನ್‌ ವೈಷ್ಣವ್‌, ಐಟಿ ಇಲಾಖೆ ಕಾರ್ಯದರ್ಶಿ ಅಖಿಲೇಶ್‌ ಕುಮಾರ್‌ ಕೂಡ ನಾಳೆ ದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.


ಪ್ರಶಸ್ತಿ 7ನೇ ಆವೃತಿ ಡಿಜಿಟಲ್‌ ಜಗತ್ತಿನ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಲಿದೆ. ಸ್ಟಾರ್ಟಪ್‌, ಅತ್ಯುತ್ತಮ ವೆಬ್‌ ಮತ್ತು ಮೊಬೈಲ್‌ಗೆ ಸಂಬಂಧಿತ ಆವಿಷ್ಕಾರಗಳಿಗೂ ಪ್ರಶಸ್ತಿ ಲಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT