ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದಲ್ಲಿ ಮಕ್ಕಳಿಗೆ ಕಳಪೆ ಊಟ: ಇದು ಸಾರೋ ನೀರೋ ಪ್ರಿಯಾಂಕ ಗಾಂಧಿ ಕಿಡಿ

Last Updated 11 ಡಿಸೆಂಬರ್ 2019, 9:54 IST
ಅಕ್ಷರ ಗಾತ್ರ

ಚಿತ್ರಕೂಟ(ಉತ್ತರ ಪ್ರದೇಶ): ಕಳಪೆಗುಣಮಟ್ಟದಆಹಾರವನ್ನು ಇಲ್ಲಿನಸರ್ಕಾರಿ ಶಾಲೆಗಳಲ್ಲಿಮಕ್ಕಳಿಗೆ ನೀಡಲಾಗುತ್ತಿದೆಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಪ್ರಿಯಾಂಕಗಾಂಧಿವಾಧ್ರಅವರು ಯೋಗಿಅಧಿತ್ಯನಾಥ್ನೇತೃತ್ವದಬಿಜೆಪಿಸರ್ಕಾರವನ್ನು ಟೀಕಿಸಿದ್ದಾರೆ.

ಚಿತ್ರಕೂಟದಲ್ಲಿನ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಪೋಟೊವನ್ನು ಟ್ವೀಟ್‌ ಮಾಡುವ ಮೂಲಕಯೋಗಿಅಧಿತ್ಯನಾಥ್ಸರ್ಕಾರವನ್ನು ಟೀಕಿಸಿದ್ದಾರೆ.

ಮಕ್ಕಳಿಗೆ ಆರೋಗ್ಯಕರ ಆಹಾರನೀಡುವುದು ಮಧ್ಯಾಹ್ನದಬಿಸಿಯೂಟ ಯೋಜನೆಯ ಮುಖ್ಯ ಉದ್ದೇಶವಾಗಿದೆ.ಆದರೆ ಇಲ್ಲಿ ಮಕ್ಕಳಿಗೆ ರೊಟ್ಟಿಯಜೊತೆಗೆ ಉಪ್ಪು, ಲೀಟರ್‌ ಹಾಲಿಗೆ ಬಕೇಟ್‌ ನೀರು ಹಾಗೂನೀರಿನಿಂದ ಕೂಡಿದ ಸಾರನ್ನು ನೀಡಲಾಗುತ್ತಿದೆ ಎಂದುಪ್ರಿಯಾಂಕಗಾಂಧಿವಾಧ್ರ ಟೀಕಿಸಿದ್ದಾರೆ.

ಇಲ್ಲಿನ ಸರ್ಕಾರದಅಸಡ್ಡಯಿಂದಾಗಿಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದುಸ್ಥಳೀಯ ಪತ್ರಕರ್ತ ಸಾಯಿನಾಥನ್‌ ಎಂಬುವರು ಟ್ವೀಟ್‌ ಅನ್ನು ಪ್ರಿಯಾಂಕ ಗಾಂಧಿ ಸಾಮಾಜಿಕ ಜಾಲತಾಣಗಳಲ್ಲಿಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT