ನವದೆಹಲಿ: ಆಮ್ಲಜನಕ ಹೊತ್ತ ವಾಹನಗಳನ್ನು ದೆಹಲಿ ಒಳಗೆ ಬಿಡುತ್ತಿಲ್ಲ ಎಂಬ ಆರೋಪಗಳನ್ನು ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ಪ್ರತಿಭಟನಾನಿರತ ರೈತರು ಬುಧವಾರ ತಳ್ಳಿ ಹಾಕಿದ್ದಾರೆ.

ದೆಹಲಿಯ ಹಲವಾರು ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಕಂಡುಬಂದು, ಕೋವಿಡ್ ರೋಗಿಗಳ ಜೀವಕ್ಕೆ ಅಪಾಯ ಬಂದೊಗಿದೆ. ಇಂಥ ಸಂದರ್ಭದಲ್ಲಿ ಆಮ್ಲಜನಕ ಹೊತ್ತ ವಾಹನಗಳು ದೆಹಲಿ ಪ್ರವೇಶಿಸುವುದಕ್ಕೆ ಪ್ರತಿಭಟನಾ ನಿರತ ರೈತರು ಅಡ್ಡಿಪಡಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದ ಪರ್ವೇಶ್ ವರ್ಮಾ ಮಂಗಳವಾರ ಆರೋಪಿಸಿದ್ದರು.

‘ಆಮ್ಲಜನಕ ಹೊತ್ತ ವಾಹನಗಳು, ಆಂಬುಲೆನ್ಸ್ ಸಂಚಾರ ಸೇರಿದಂತೆ ಯಾವುದೇ ಅಗತ್ಯ ಸೇವೆಗೆ ನಾವು ಅಡ್ಡಿಪಡಿಸಿಲ್ಲ. ಇದೊಂದು ಅಪಪ್ರಚಾರ’ ಎಂದು ಪ್ರತಿಭಟನೆಯಲ್ಲಿ ಭಾಗಿಯಾಗಿರುವ ರೈತ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.

‘ಮಾನವ ಹಕ್ಕುಗಳಿಗಾಗಿರೈತರು ಹೋರಾಟ ನಡೆಸುತ್ತಿದ್ದಾರೆ. ಈ ವಿಷಯ ಮುಂದಿಟ್ಟುಕೊಂಡು ನಡೆಯುವ ಪ್ರತಿಯೊಂದು ಹೋರಾಟಕ್ಕೂ ರೈತರ ಬೆಂಬಲ ಇದ್ದೇ ಇರುತ್ತದೆ’ ಎಂದು ಸಂಘಟನೆ ಹೇಳಿದೆ.

‘ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ದೆಹಲಿಯ ಗಡಿಗಳಲ್ಲಿ ಮೊಳೆಗಳಿಂದ ಬ್ಯಾರಿಕೇಡ್ ಅಳವಡಿಸಿರುವುದು ಕೇಂದ್ರ ಸರ್ಕಾರವೇ ಹೊರತು ರೈತರಲ್ಲ’ ಎಂದೂ ಸಂಘಟನೆ ತಿರುಗೇಟು ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.