ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂಟ್ಯೂಬರ್‌ಗೆ ಶೋಷಣೆ: ಮಹಾರಾಷ್ಟ್ರ ಪೊಲೀಸರಿಂದ ಯುವಕನ ಬಂಧನ

Published 20 ಡಿಸೆಂಬರ್ 2023, 10:59 IST
Last Updated 20 ಡಿಸೆಂಬರ್ 2023, 10:59 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಕೊರಿಯಾದ ಮಹಿಳಾ ಯೂಟ್ಯೂಬರ್ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಯುವಕರಿಂದ ಶೋಷಣೆಗೆ ಒಳಗಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಪಿಂಪ್ರಿ–ಚಿಂಚ್‌ವಾಡ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

ಈ ಕುರಿತು ಎನ್‌ಡಿಟಿವಿ ವೆಬ್‌ಸೈಟ್ ವರದಿ ಮಾಡಿದೆ.

ಕೆಲ್ಲಿ ಎನ್ನುವ ಕೊರಿಯನ್ ಯೂಟ್ಯೂಬರ್ ದೀಪಾವಳಿ ಸಂದರ್ಭದಲ್ಲಿ ಮುಂಬೈ ಹಾಗೂ ಪುಣೆಗೆ ತೆರಳಿ ಅಲ್ಲಿನ ಸ್ಥಳೀಯ ಜನಜೀವನದ ಬಗ್ಗೆ ವಿಡಿಯೊ ಮಾಡುತ್ತಿದ್ದರು. ಪಿಂಪ್ರಿ–ಚಿಂಚ್‌ವಾಡ್ ಮಾರುಕಟ್ಟೆಯಲ್ಲಿ ವಿಡಿಯೊ ಮಾಡುವಾಗ ಅಂಗಡಿಯೊಂದರ ಬಳಿ ಯುವಕನೊಬ್ಬ ಕೆಲ್ಲಿ ಕೊರಳಿಗೆ ಕೈ ಹಾಕಿ ಬಿಗಿಯಾಗಿ ಹಿಡಿದುಕೊಂಡಿದ್ದಲ್ಲದೇ ತನ್ನ ಸಹವರ್ತಿಯೊಬ್ಬನಿಗೆ ‘ಹೀಗೆ ಗಟ್ಟಿಯಾಗಿ ಹಿಡಿದುಕೊಳ್ಳಬೇಕು’ ಎಂದು ಪ್ರಚೋದಿಸಿದ್ದ.

ಘಟನೆಗೆ ಸಂಬಂಧಿಸಿದ ವಿಡಿಯೊವನ್ನು ಕೆಲ್ಲಿ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ನೆಟ್ಟಿಗರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದರು.

ಈ ಕುರಿತು ಸಂತ್ರಸ್ತ ಯುವತಿ ಯಾವುದೇ ದೂರು ದಾಖಲಿಸಿರಲಿಲ್ಲ. ಆದರೆ, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಯುವಕನನ್ನು ಬಂಧಿಸಲಾಗಿದೆ ಎಂದು ಪಿಂಪ್ರಿ– ಚಿಂಚ್‌ವಾಡ ಎಸಿಪಿ ಸತೀಶ್ ಮಾನೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT