ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲು ತಿನ್ನಿ, ನಂತರ ಪಾವತಿಸಿ – ಮಾವಿನ ಹಣ್ಣಿನ ಖರೀದಿಗೂ ಬಂತು ಇಎಂಐ ಸೌಲಭ್ಯ

Last Updated 8 ಏಪ್ರಿಲ್ 2023, 12:50 IST
ಅಕ್ಷರ ಗಾತ್ರ

ಪುಣೆ: ಆಲ್ಫಾನ್ಸೊ ಮಾವಿನ ಹಣ್ಣುಗಳ ಬೆಲೆ ಏರಿಕೆ ಬೆನ್ನಲ್ಲೇ ಮಹಾರಾಷ್ಟ್ರ ಪುಣೆಯ ವ್ಯಾಪಾರಿಯೊಬ್ಬರು ಹಣ್ಣುಗಳ ರಾಜ ಮಾವಿನ ಹಣ್ಣನ್ನು ಮಾಸಿಕ ಕಂತುಗಳಲ್ಲಿ ನೀಡುವ ಹೊಸ ಪ್ರಯತ್ನ ಮಾಡುತ್ತಿದ್ದಾರೆ.

ರೆಫ್ರಿಜರೇಟರ್‌ ಮತ್ತು ಏರ್‌ಕಂಡೀಷರ್‌ಗಳನ್ನು ಮಾಸಿಕ ಕಂತುಗಳಲ್ಲಿ ಖರೀದಿಸಬಹುದಾದರೆ ಮಾವಿನಹಣ್ಣು ಖರೀದಿಸಲು ಏಕೆ ಸಾಧ್ಯವಾಗಬಾರದು? ಎಂದು ಗುರುಕೃಪಾ ಟ್ರೇಡರ್ಸ್‌ ಮತ್ತು ಹಣ್ಣು ಉತ್ಪನ್ನಗಳ ವ್ಯಾಪಾರಿ ಗೌರವ್‌ ಸನಾಸ್‌ ಹೇಳಿದ್ದಾರೆ. ಕೊಂಕಣ ಪ್ರದೇಶದ ಎರಡು ಜಿಲ್ಲೆಗಳಾದ ದೇವಗಢ ಮತ್ತು ರತ್ನಗಿರಿಯಿಂದ ಬರುವ ಆಲ್ಫಾನ್ಸೊ ಮಾವಿನ ಹಣ್ಣುಗಳು ಬಹಳ ಉತ್ತಮವಾಗಿದ್ದು ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಡಜನ್‌ ಹಣ್ಣುಗಳಿಗೆ ₹800 ರಿಂದ ₹1,300 ಬೆಲೆಯಲ್ಲಿ ಮಾರಾಟವಾಗುತ್ತಿವೆ.

ಇಡೀ ದೇಶದಲ್ಲಿ ಮೊದಲ ಬಾರಿಗೆ ಮಾವಿನ ಹಣ್ಣುಗಳನ್ನು ಇಎಂಐನಲ್ಲಿ ಮಾರುತ್ತಿರುವ ಮೊದಲ ಕುಟುಂಬ ನಮ್ಮದಾಗಿದೆ. ‘ಮಾವಿನ ಹಣ್ಣಿನ ಮಾಸ ಪ್ರಾರಂಭವಾಗುತ್ತಿದ್ದಂತೆ ಯಾವಾಗಲೂ ಹಣ್ಣುಗಳ ಬೆಲೆಯೂ ಹೆಚ್ಚಾಗಿರುತ್ತದೆ. ಆದ್ದರಿಂದ ರಿಫ್ರಿಜರೇಟರ್‌ ಮತ್ತು ಏರ್‌ಕಂಡೀಷರ್‌ಗಳನ್ನು ಇಎಂಐನಲ್ಲಿ ಖರೀದಿಸಬಹುದಾದರೆ ಮಾವಿನ ಹಣ್ಣುಗಳ ಖರೀದಿ ಏಕೆ ಸಾಧ್ಯವಾಗಬಾರದು? ಎಂಬ ಆಲೋಚನೆ ಬಂದಿತು, ಇದರಿಂದ ಎಲ್ಲರೂ ಮಾವಿನ ಹಣ್ಣನ್ನು ಖರೀದಿಸಬಹುದಾಗಿದೆ’ ಎಂದು ಸನಾಸ್‌ ಹೇಳಿದರು.

ಮೊಬೈಲ್‌ಗಳನ್ನು ಇಎಂಐನಲ್ಲಿ ಖರೀದಿಸುವ ರೀತಿಯಲ್ಲೆ ತಮ್ಮ ಔಟ್‌ಲೆಟ್‌ನಲ್ಲಿ ಗ್ರಾಹಕರು ಮಾವಿನ ಹಣ್ಣುಗಳನ್ನು ಖರೀದಿಸಬಹುದಾಗಿದೆ. ಮಾಸಿಕ ಕಂತುಗಳಲ್ಲಿ ಮೂರು, ಆರು ಮತ್ತು ಹನ್ನೆರೆಡು ಹೀಗೆ ವಿವಿಧ ಬಗೆಯ ಆಯ್ಕೆಗಳಿದ್ದು, ಕ್ರೆಡಿಟ್‌ ಕಾರ್ಡ್‌ ಮತ್ತು ಹಣವನ್ನು ಬಳಸಿ ಖರೀದಿಸಬಹುದಾಗಿದೆ. ಇಎಂಐ ಸೌಲಭ್ಯವನ್ನು ಪಡೆಯಲು ಕನಿಷ್ಠ ₹5000 ಬೆಲೆಯ ಮಾವಿನ ಹಣ್ಣುಗಳನ್ನು ಖರೀದಿ ಮಾಡಬೇಕು ಎಂದು ವ್ಯಾಪಾರಿ ಸನಾಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT