ತಿರುಪತಿ: ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಟಿಟಿಡಿಯ ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್‌ಗೆ ಪಂಜಾಬ್ ಮೂಲದ ಉದ್ಯಮಿಯೊಬ್ಬರು ₹21 ಕೋಟಿ ಹಣವನ್ನು ದೇಣಿಗೆ ಮಾಡಿದ್ದಾರೆ.
ಗಂಭೀರ ಸ್ವರೂಪದ ಕಾಯಿಲೆಯುಳ್ಳ ಬಡ ರೋಗಗಿಗಳಿಗೆ ಎಸ್.ವಿ ಪ್ರಾಣದಾನ ಟ್ರಸ್ಟ್ ಯೋಜನೆ ಅಡಿಯಲ್ಲಿ, ಟಿಟಿಡಿ ಮುನ್ನಡೆಸುವ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ.
ಭಾನುವಾರ ರಾತ್ರಿ ಪ್ರಕಟಣೆ ಹೊರಡಿಸಿರುವ ದೇವಾಲಯದ ಆಡಳಿತ ಮಂಡಳಿ, ‘ಪಂಜಾಬ್ ಮೂಲದ ರಾಜೀಂದರ್ ಗುಪ್ತಾ ಅವರು ₹21 ಕೋಟಿ ಹಣವನ್ನು ಪ್ರಾಣದಾನ ಟ್ರಸ್ಟ್‌ಗೆ ನೀಡಿದ್ದಾರೆ. ಚೆಕ್ ಅನ್ನು ಟಿಟಿಡಿಯ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಚ್.ವೆಂಕಯ್ಯ ಚೌಧರಿ ಅವರಿಗೆ ಹಸ್ತಾಂತರಿಸಿದ್ದಾರೆ’ ಎಂದು ತಿಳಿಸಿದೆ.