ಫಿರೋಜಪುರ: ಪಂಜಾಬ್ನಲ್ಲಿರುವ 200 ವರ್ಷ ಹಳೆಯ ಫಿರೋಜಪುರ ಕೋಟೆಯನ್ನು ಇದೇ ಮೊದಲ ಬಾರಿಗೆ ಜನರಿಗೆ ಮುಕ್ತಗೊಳಿಸಲಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು, ಐತಿಹಾಸಿಕ ಹಾಗೂ ಮಹತ್ವದ ವಾಸ್ತುಶಿಲ್ಪ ತಾಣವಾಗಿರುವ ಈ ಕೋಟೆಯನ್ನು ವೀಕ್ಷಣೆಗೆ ಮುಕ್ತಗೊಳಿಸಿರುವುದಾಗಿ ಸೇನೆಯ ಗೋಲ್ಡನ್ ಆ್ಯರೋ (ಜಿಒಸಿ) ವಿಭಾಗ ತಿಳಿಸಿದೆ.

ರಾಷ್ಟ್ರದ ಪಾರಂಪರಿಕ ತಾಣಗಳನ್ನು ರಕ್ಷಿಸುವ ಹಾಗೂ ಗಡಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಒಸಿಯ ಅಧಿಕಾರಿ ಮೇಜರ್ ಜನರಲ್ ಆರ್ ಎಸ್ ಮನ್ರಾಲ್ ಹೇಳಿದರು.

ಭಾರತ– ಪಾಕಿಸ್ತಾನ ಗಡಿಯಲ್ಲಿರುವ ಈ ಕೋಟೆಯು 19 ನೇ ಶತಮಾನದಲ್ಲಿ ಸಿಖ್ ಸಾಮ್ರಾಜ್ಯದ ಕೊಡುಗೆಯಾಗಿದೆ. ರಕ್ಷಣಾತ್ಮಕ ತಂತ್ರಗಳನ್ನೊಳಗೊಂಡ ಇದರ ವಿನ್ಯಾಸ ಹಾಗೂ ನಿರ್ಮಾಣವು ಅಂದಿನ ಕಾಲದ ಸೇನೆಯ ಜಾಣ್ಮೆಗೆ ಉದಾಹರಣೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.